ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲ: ಆಕಸ್ಮಿಕ ಲಾಭ ತೆರಿಗೆ ಏರಿಕೆ

Published 3 ಫೆಬ್ರುವರಿ 2024, 15:32 IST
Last Updated 3 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲಿನ ಆಕಸ್ಮಿಕ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ ₹1,700ರಿಂದ ₹3,200ಕ್ಕೆ ಹೆಚ್ಚಿಸಿದೆ. 

ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (ಎಸ್‌ಎಇಡಿ) ರೂಪದಲ್ಲಿ ಈ ತೆರಿಗೆ ವಿಧಿಸಲಾಗುತ್ತದೆ. ಶನಿವಾರದಿಂದಲೇ ಈ ಆದೇಶ ಜಾರಿಗೆ ಬಂದಿದೆ ಎಂದು ತಿಳಿಸಿದೆ.

ಆದರೆ ಡೀಸೆಲ್‌, ಪೆಟ್ರೋಲ್‌ ಮತ್ತು ವಿಮಾನ ಇಂಧನದ (ಎಟಿಎಫ್‌) ಮೇಲಿನ ತೆರಿಗೆಯಲ್ಲಿ ಏರಿಕೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.  

ವಿಶ್ವದ ಹಲವು ದೇಶಗಳಲ್ಲಿ ಇಂಧನ ಕಂಪನಿಗಳು ಗಳಿಸುವ ಹೆಚ್ಚಿನ ಆದಾಯದ ಮೇಲೆ ಆಕಸ್ಮಿಕ ಲಾಭ ತೆರಿಗೆ ವಿಧಿಸುವ ಪದ್ಧತಿ ಇದೆ. 2022ರ ಜುಲೈ 1ರಿಂದ ದೇಶದಲ್ಲಿ ಈ ತೆರಿಗೆ ಪದ್ಧತಿಯನ್ನು ಸರ್ಕಾರ ಜಾರಿಗೆ ತಂದಿದೆ. 

‍ಪ್ರತಿ 15 ದಿನಕ್ಕೊಮ್ಮೆ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ಈ ತೆರಿಗೆ ದರವನ್ನು ಮರು ಪರಿಶೀಲಿಸಲಾಗುತ್ತದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT