ನವದೆಹಲಿ: ಕೇಂದ್ರ ಸರ್ಕಾರವು ಉಕ್ಕು ತಯಾರಿಕೆ ವಲಯಕ್ಕೆ ಮತ್ತೊಂದು ಸುತ್ತಿನಲ್ಲಿ ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್ಐ) ಯೋಜನೆಯಡಿ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಪಿಎಲ್ಐ ಯೋಜನೆ 1.1ಕ್ಕೆ ಸೋಮವಾರ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಮಿಶ್ರಲೋಹದ ಉಕ್ಕು ಆಮದು ಪ್ರಮಾಣ ತಗ್ಗಿಸುವ ಮೂಲಕ ದೇಶೀಯ ಮಟ್ಟದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡುವ ದೃಷ್ಟಿಯಿಂದ ಸರ್ಕಾರವು ಈ ವಲಯಕ್ಕೂ ಪಿಎಲ್ಐ ಯೋಜನೆಯನ್ನು ವಿಸ್ತರಿಸಿತ್ತು.

ಈ ಹೊಸ ಕ್ರಮದಿಂದಾಗಿ ₹27,106 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ನೇರವಾಗಿ 14,760 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. 79 ಲಕ್ಷ ಟನ್ ಮಿಶ್ರಲೋಹದ ಉಕ್ಕು ಉತ್ಪಾದನೆಯಾಗುವ ನಿರೀಕ್ಷೆಯಿದೆ.

ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಚೀನಾದಿಂದ ಕಡಿಮೆ ಗುಣಮಟ್ಟದ ಉಕ್ಕು ಆಮದು ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ದೇಶದ ಉಕ್ಕು ಉದ್ಯಮಕ್ಕೆ ಈ ಯೋಜನೆಯು ಹೆಚ್ಚು ಬಲ ನೀಡಲಿದೆ ಎಂದು ಹೇಳಲಾಗಿದೆ.

ಮಿಶ್ರಲೋಹದ ಉಕ್ಕನ್ನು ಆಟೊಮೊಬೈಲ್, ರಕ್ಷಣೆ ಮತ್ತು ಎಲೆಕ್ಟ್ರಾನಿಕ್ ವಲಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ಕಳೆದ ವರ್ಷದ ನವೆಂಬರ್ ಅಂತ್ಯಕ್ಕೆ ಕಂಪನಿಗಳು ₹18,300 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, 8,660 ಉದ್ಯೋಗಗಳು ಸೃಷ್ಟಿಯಾಗಿವೆ.

ಸರ್ಕಾರವು ಪಿಎಲ್ಐ ಅಡಿ ಪಾಲ್ಗೊಳ್ಳುವ ಕಂಪನಿಗಳ ಜೊತೆಗೆ ನಿಯಮಿತವಾಗಿ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ. ಹಾಗಾಗಿ, ಹೆಚ್ಚಿನ ಬಂಡವಾಳ ಆಕರ್ಷಿಸಲು ಈ ಕ್ರಮಕೈಗೊಂಡಿದೆ ಎಂದು ಹೇಳಲಾಗಿದೆ.

2020ರಲ್ಲಿ ಕೋವಿಡ್ನಿಂದ ಲಾಕ್ಡೌನ್ ಆದ ವೇಳೆ ದೇಶೀಯಮಟ್ಟದಲ್ಲಿ ತಯಾರಿಕೆಗೆ ಪ್ರೋತ್ಸಾಹ ನೀಡಲು ಉತ್ಪಾದನೆ ಆಧರಿತ ಉತ್ತೇಜನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಆರಂಭದಲ್ಲಿ ಮೂರು ವಲಯಗಳಲ್ಲಷ್ಟೇ ಯೋಜನೆ ಅನುಷ್ಠಾನಗೊಂಡಿತ್ತು. ಅದೇ ವರ್ಷದ ನವೆಂಬರ್ನಲ್ಲಿ ಉಕ್ಕು ವಲಯಕ್ಕೂ ಇದನ್ನು ವಿಸ್ತರಿಸಲಾಯಿತು.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ 47 ಲಕ್ಷ ಟನ್ ಉಕ್ಕು ಆಮದು ಮಾಡಿಕೊಳ್ಳಲಾಗಿದೆ. ಇದರ ಹಿಂದಿನ ವರ್ಷದ ಇದೇ ಅವಧಿಯಲ್ಲಿ 33.3 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಹೋಲಿಸಿದರೆ ಆಮದು ಪ್ರಮಾಣದಲ್ಲಿ ಶೇ 41ರಷ್ಟು ಏರಿಕೆಯಾಗಿದೆ.

23.1 ಲಕ್ಷ ಟನ್ ಉಕ್ಕು ರಫ್ತು ಮಾಡಲಾಗಿದೆ. ರಫ್ತು ಪ್ರಮಾಣದಲ್ಲಿ ಶೇ 36ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಉಕ್ಕು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.