ಶನಿವಾರ, ಜುಲೈ 2, 2022
25 °C

ಹಿಂದುಸ್ಥಾನ್‌ ಜಿಂಕ್‌ನಲ್ಲಿನ ಕೇಂದ್ರದ ಷೇರು ಮಾರಾಟಕ್ಕೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರವು ಹಿಂದುಸ್ಥಾನ್‌ ಜಿಂಕ್‌ನಲ್ಲಿ ಹೊಂದಿರುವ ಶೇಕಡ 29.5ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಷೇರು ಮಾರಾಟ ಪ್ರಸ್ತಾವಕ್ಕೆ ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಷೇರು ಮಾರಾಟದಿಂದ ₹ 38 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಐಪಿಒ ಮೂಲಕ ಎಲ್‌ಐಸಿ ಷೇರು ಮಾರಾಟದಿಂದ ₹ 20,500 ಕೋಟಿ ಬಂಡವಾಳ ಸಂಗ್ರಹ ಮಾಡಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

2023ರ ಮಾರ್ಚ್‌ಗೆ ಕೊನೆಗೊಳ್ಳಲಿರುವ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕ ₹ 65 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಎಲ್‌ಐಸಿ ಮತ್ತು ಒಎನ್‌ಜಿಸಿಯಲ್ಲಿನ ಷೇರುಗಳ ಮಾರಾಟದ ಮೂಲಕ ಈಗಾಗಲೇ ₹ 23,575 ಕೋಟಿ ಬಂಡವಾಳ ಸಂಗ್ರಹಿಸಿದೆ. ಮಾರುಕಟ್ಟೆ ಸ್ಥಿತಿಯು ಉತ್ತಮವಾಗಿದ್ದರೆ ಹಿಂದುಸ್ಥಾನ್‌ ಜಿಂಕ್‌ನ ಷೇರು ವಿಕ್ರಯವು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿಯೇ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಅತಿ ಹೆಚ್ಚು ಜಿಂಕ್‌ ತಯಾರಿಸುವ ಜಗತ್ತಿನ ಎರಡನೇ ಕಂಪನಿ ಆಗಿರುವ ಹಿಂದುಸ್ಥಾನ್‌ ಜಿಂಕ್‌, ವೇದಾಂತ ಲಿಮಿಟೆಡ್‌ನ ಅಂಗಸಂಸ್ಥೆ. ಹಿಂದುಸ್ಥಾನ್‌ ಜಿಂಕ್‌ನಲ್ಲಿ ವೇದಾಂತ ಲಿಮಿಟೆಡ್‌ ಶೇ 65ರಷ್ಟು ಷೇರುಪಾಲು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.