ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರೂಪ್‌ಎಂ ಸಿಒಒ ಆಗಿ ಅಶ್ವಿನ್‌ ನೇಮಕ

Published 5 ಜುಲೈ 2024, 16:03 IST
Last Updated 5 ಜುಲೈ 2024, 16:03 IST
ಅಕ್ಷರ ಗಾತ್ರ

ಬೆಂಗಳೂರು: ಡಬ್ಲ್ಯುಪಿಪಿ ಮೀಡಿಯಾ ಇನ್‌ವೆಸ್ಟ್‌ಮೆಂಟ್‌ ಗ್ರೂಪ್‌ನ ‘ಗ್ರೂಪ್‌ಎಂ’ ಕಂಪನಿಯ ದಕ್ಷಿಣ ಏಷ್ಯಾದ ಸಿಒಒ ಆಗಿ ಅಶ್ವಿನ್‌ ಪದ್ಮನಾಭನ್‌ ಅವರನ್ನು ನೇಮಕ ಮಾಡಲಾಗಿದೆ.

ಅಶ್ವಿನ್‌ ಅವರು ಕಂಪನಿಯ ಹೂಡಿಕೆ, ವ್ಯಾಪಾರ, ಪಾಲುದಾರಿಕೆ, ಮಾರ್ಕೆಟಿಂಗ್‌ ಸೇರಿ ವಿವಿಧ ವಿಷಯಗಳ ಮೇಲ್ವಿಚಾರಣೆ  ನಡೆಸಲಿದ್ದಾರೆ. ಗ್ರೂಪ್‌ಎಂನ ವೈವಿಧ್ಯಮಯ ಸೇವೆಗಳನ್ನು ಒಗ್ಗೂಡಿಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಅಶ್ವಿನ್ ಅವರು ಗ್ರೂಪ್‌ಎಂನ ದಕ್ಷಿಣ ಏಷ್ಯಾದ ಸಿಇಒ ಪ್ರಶಾಂತ್ ಕುಮಾರ್ ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ.

‘ಅಶ್ವಿನ್‌ ಅವರು ಗ್ರಾಹಕರ ಅಗತ್ಯತೆ ಮತ್ತು ಉದ್ಯಮದ ಸ್ಥಿತಿಗತಿಯನ್ನು ಅರ್ಥೈಸಿಕೊಂಡಿದ್ದಾರೆ. ಉದ್ಯಮದ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ’ ಎಂದು ಸಿಇಒ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

‘ಗ್ರಾಹಕರು ತಮ್ಮ ವಹಿವಾಟಿನ ಹೆಚ್ಚಳಕ್ಕೆ ಎದುರು ನೋಡುತ್ತಿದ್ದಾರೆ. ಅವರ ಹಿತಾಸಕ್ತಿಗೆ ಅನುಗುಣವಾಗಿ ಕಂಪನಿಯು ಸಹಕರಿಸಲಿದೆ. ಕಂಪನಿಯ ಬ್ರ್ಯಾಂಡ್‌ನ ಯಶಸ್ಸಿಗೆ ಶ್ರಮಿಸುತ್ತೇನೆ’ ಎಂದು ಅಶ್ವಿನ್‌ ಪದ್ಮನಾಭನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT