ಮಂಗಳವಾರ, ಅಕ್ಟೋಬರ್ 4, 2022
25 °C

ಜಿಆರ್‌ಟಿಯಿಂದ ಮದುವೆ ಸಮಾರಂಭಗಳಿಗೆ ವಿಶೇಷ ಆಭರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜಿಆರ್‌ಟಿ ಜುವೆಲರ್ಸ್‌ ಕಂಪನಿಯು ಮದುವೆ ಸಮಾರಂಭಗಳಿಗಾಗಿ ವಿಶೇಷವಾಗಿ ಸಂಗ್ರಹಿಸಲಾಗದ ಆಭರಣಗಳನ್ನು ಬಿಡುಗಡೆ ಮಾಡಿದೆ.

ಚಿನ್ನದ ವಜ್ರಗಳು, ಪ್ಲಾಟಿನಂ, ಬೆಳ್ಳಿ ಮತ್ತು ಬೆಲೆಬಾಳುವ ರತ್ನದ ಹರಳುಗಳ ಉಂಗುರುಗಳು, ಬಳೆ, ಕಿವಿಯೋಲೆ, ಹಾರಗಳು ಮತ್ತು ತೋಳುಪಟ್ಟಿಗಳಂತಹ ವಿವಿಧ ಬಗೆಯ ಆಭರಣಗಳನ್ನು ಈ ಸಂಗ್ರಹವು ಒಳಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಮದುವೆ ಸಮಾರಂಭಗಳಲ್ಲಿ ಆಭರಣಗಳು ಯಾವಾಗಲೂ ನಿರ್ಣಾಯಕ ಮತ್ತು ಭಾವನಾತ್ಮಕ ಪಾತ್ರ ವಹಿಸುತ್ತವೆ. ನವವಿವಾಹಿತರು ಮತ್ತು ಅವರ ಕುಟುಂಬಗಳು ಚಿನ್ನಾಭರಣಗಳಿಗೆ ನೀಡುವ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದು, ಈ ಸಂಗ್ರಹವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಅನಂತ ಪದ್ಮನಾಭನ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು