ನವದೆಹಲಿ: ಜಿಎಸ್ಟಿ ದರ ಪರಿಷ್ಕರಣೆಯಿಂದ 50 ಕೆ.ಜಿ ತೂಕದ ಸಿಮೆಂಟ್ ಚೀಲದ ಬೆಲೆ ₹30ರಿಂದ ₹35ರವರೆಗೆ ಇಳಿಕೆ ಆಗಬಹುದು ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆ ಹೇಳಿದೆ. ಅಲ್ಲದೆ, ನಿರ್ಮಾಣದ ವೆಚ್ಚವು ಸಹ ತಗ್ಗಲಿದೆ ಎಂದು ತಿಳಿಸಿದೆ.

ಪ್ರಸ್ತುತ ಸಿಮೆಂಟ್ಗೆ ಶೇ 28ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಜಿಎಸ್ಟಿ ಮಂಡಳಿಯ ನಿರ್ಧಾರದಂತೆ ಸೆಪ್ಟೆಂಬರ್ 22ರಿಂದ ಸಿಮೆಂಟ್ಗೆ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ.

ಹೆಚ್ಚಿನ ಸ್ಪರ್ಧಾತ್ಮಕತೆಯಿಂದಾಗಿ ಕಂಪನಿಗಳು ದರ ಕಡಿತಗೊಳಿಸಲಿವೆ. ಇದರ ಪ್ರಯೋಜನ ಗ್ರಾಹಕರಿಗೆ ದೊರೆಯಲಿದ್ದು, ಸಿಮೆಂಟ್ ದರ ಇಳಿಕೆಯಾಗಲಿದೆ. ಇದರಿಂದ ಮೂಲಸೌಕರ್ಯ ಮತ್ತು ಮನೆಗಳ ನಿರ್ಮಾಣ ವೆಚ್ಚವು ಕಡಿಮೆ ಆಗಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.

ಪ್ರಸಕ್ತ ವರ್ಷದಲ್ಲಿ ಸಿಮೆಂಟ್ ಬೇಡಿಕೆ ಹೆಚ್ಚಳ ಶೇ 5ರಿಂದ ಶೇ7ರಷ್ಟಿರಲಿದೆ ಎಂದು ತನ್ನ ಅಂದಾಜಿನಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.