ಭಾನುವಾರ, ಫೆಬ್ರವರಿ 23, 2020
19 °C

ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಜನವರಿಯಲ್ಲಿ ₹1.1 ಲಕ್ಷ ಕೋಟಿಗೆ ತಲುಪಿದೆ.

2019ರ ಜನವರಿಯಲ್ಲಿ ₹1.02 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು.  2019ರ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿಯೂ ₹1 ಲಕ್ಷ ಕೋಟಿಗಿಂತಲೂ ಅಧಿಕ ತೆರಿಗೆ ಸಂಗ್ರಹವಾಗಿತ್ತು.

ತೆರಿಗೆ ವಂಚನೆ ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿರುವುದರಿಂದಾಗಿತೆರಿಗೆ ಸಂಗ್ರಹದಲ್ಲಿ ಏರಿಕೆಯಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್ ಪಾಂಡೆ ನೇತೃತ್ವದ ಸಮಿತಿಯು ನಿಗದಿಪಡಿಸಿರುವ ಗುರಿಯ ಸಮೀಪದಲ್ಲಿದೆ. ಜನವರಿ ಮತ್ತು ಫೆಬ್ರುವರಿಯಲ್ಲಿ ಪ್ರತಿ ತಿಂಗಳು ₹1.15 ಲಕ್ಷ ಕೋಟಿ ಸಂಗ್ರಹಿಸುವ ಗುರಿ ನೀಡಲಾಗಿದೆ.

ಕೇಂದ್ರ ಜಿಎಸ್‌ಟಿ  ಮೂಲಕ ₹20,944 ಕೋಟಿ, ರಾಜ್ಯ ಜಿಎಸ್‌ಟಿಯಿಂದ ₹28,224 ಕೋಟಿ ಹಾಗೂ ಸಮಗ್ರ ಜಿಎಸ್‌ಟಿಯಿಂದ
₹53,013 ಕೋಟಿ ಸಂಗ್ರಹವಾಗಿದೆ. ಸೆಸ್‌ನಿಂದ ₹8,637 ಕೋಟಿ ಬಂದಿದೆ ಎಂದು ಮಾಹಿತಿ ನೀಡಿದೆ.

ಡಿಸೆಂಬರ್‌ ತಿಂಗಳಿನ ಜಿಎಸ್‌ಟಿಆರ್‌ 3ಬಿ ಸಲ್ಲಿಕೆಯು 83 ಲಕ್ಷಕ್ಕೆ ತಲುಪಿದೆ.

ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿನ ಜಿಎಸ್‌ಟಿ ಸಂಗ್ರಹ ₹3.28 ಲಕ್ಷ ಕೋಟಿಗಳಷ್ಟಾಗಿದ್ದು, ಬಜೆಟ್‌ ಅಂದಾಜಿಗಿಂತಲೂ ಶೇ 40ರಷ್ಟು ಕಡಿಮೆಯಾಗಿದೆ.

ನಕಲಿ ಇನ್‌ವಾಯ್ಸ್‌ ಪತ್ತೆ: ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಇನ್‌ವಾಯ್ಸ್‌, ಜಿಎಸ್‌ಟಿಆರ್‌–1, ಜಿಎಸ್‌ಟಿಆರ್–2ಎ ಮತ್ತು ಜಿಎಸ್‌ಟಿಆರ್‌–3ಬಿಯಲ್ಲಿನ ದತ್ತಾಂಶಗಳು ಹೊಂದಾಣಿಕೆ ಆಗದೇ ಇರುವುದು, ರಿಟರ್ನ್ಸ್‌ ಸಲ್ಲಿಸದೇ ಇರುವುದು, ನಕಲಿ ಇನ್‌ವಾಯ್ಸ್‌ ಸಲ್ಲಿಸಿ ಮರುಪಾವತಿ ಪಡೆಯುವುದು ಒಳಗೊಂಡು ಇನ್ನೂ ಹಲವು ಅಂಶಗಳ ಬಗ್ಗೆ ತೆರಿಗೆ ಅಧಿಕಾರಿಗಳು ಸಮಗ್ರವಾಗಿ ಪರಿಶೀಲನೆ ನಡೆಸಿ ತೆರಿಗೆ ವಂಚನೆಯನ್ನು ಪತ್ತೆ ಮಾಡಲು ಆರಂಭಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು