ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ; ಇದು 19 ತಿಂಗಳಲ್ಲಿ ಕನಿಷ್ಠ ಸಂಗ್ರಹ 

Last Updated 1 ಅಕ್ಟೋಬರ್ 2019, 17:16 IST
ಅಕ್ಷರ ಗಾತ್ರ

ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಇಳಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಕೇವಲ₹91,916 ಕೋಟಿ ಸಂಗ್ರಹವಾಗಿದೆ. ಕಳೆದ 19 ತಿಂಗಳಲ್ಲಿ ಕನಿಷ್ಠಸಂಗ್ರಹವಾಗಿದೆ ಇದು.

ಮಂದಗತಿಯ ಆರ್ಥಿಕ ಬೆಳವಣಿಗೆಯು ಜಿಎಸ್‌ಟಿ ಸಂಗ್ರಹದ ಮೇಲೆಯೂ ಪರಿಣಾಮ ಬೀರುತ್ತಿದೆ. ತಿಂಗಳಿನಿಂದ ತಿಂಗಳಿಗೆ ಸಂಗ್ರಹದಲ್ಲಿ ಇಳಿಕೆ ಕಂಡುಬರುತ್ತಿದೆ.

2018 ಸಪ್ಟೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹಕ್ಕೆ ಹೋಲಿಸಿದರೆ ಈ ವರ್ಷದ ಜಿಎಸ್‌ಟಿ ಸಂಗ್ರಹ 2.67 ಶೇಕಡಾ ಇಳಿಕೆಯಾಗಿದೆ. ಕಳೆದ ವರ್ಷ ಜಿಎಸ್‌ಟಿ ಸಂಗ್ರಹ ₹94,442ಕೋಟಿ ಆಗಿತ್ತು.

ಇದನ್ನೂ ಓದಿ:ಕರ ಸಮಾಧಾನ ‘ಸಬ್‌ಕಾ ವಿಶ್ವಾಸ್ ’

2019 ಸೆಪ್ಟೆಂಬರ್‌ನಲ್ಲಿ ಒಟ್ಟು ಜಿಎಸ್‌ಟಿ ಆದಾಯ ₹91,916 ಆಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ₹16, 630 ಕೋಟಿ, ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) ₹22, 598 ಕೋಟಿ, ಸಂಯೋಜಿತ ಜಿಎಸ್‌ಟಿ (ಐಜಿಎಸ್‌ಟಿ ) ₹45,069 ಕೋಟಿ ( ರಫ್ತುನಿಂದ ಸಂಗ್ರಹವಾದ 22,097 ಸೇರಿಸಿ) ಮತ್ತು ಸೆಸ್ ₹7,620 ಕೋಟಿ (ಆಮದುನಿಂದ ಸಂಗ್ರಹವಾದ ₹728 ಕೋಟಿ ಸೇರಿಸಿ) ಸಂಗ್ರಹವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

ಜಿಎಸ್‌ಟಿ ಸಂಗ್ರಹವು ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ ಮತ್ತು ಸಂಯೋಜಿತ ಜಿಎಸ್‌ಟಿಯ ಒಟ್ಟು ಮೊತ್ತವಾಗಿದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ₹37,761 ಕೋಟಿ ಸಿಜಿಎಸ್‌ಟಿ ಮತ್ತು ₹37,719 ಕೋಟಿ ಎಸ್‌ಜಿಎಸ್‌ಟಿ ಗಳಿಸಿದೆ.

ಆಗಸ್ಟ್‌ನಲ್ಲಿ ₹ 98,202 ಕೋಟಿ ಸಂಗ್ರಹವಾಗಿತ್ತು. ಸೆಪ್ಟೆಂಬರ್‌ನಲ್ಲಿ ₹ 91,916 ಕೋಟಿಗೆ ಇಳಿಕೆಯಾಗಿದೆಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2019ರ ಜನವರಿಯಿಂದ ಆಗಸ್ಟ್‌ ಅವಧಿಯಲ್ಲಿ ಮೂರನೇ ಬಾರಿಗೆ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿ
ಗಿಂತಲೂ ಕೆಳಕ್ಕೆ ಇಳಿದಿದೆ.ಆಗಸ್ಟ್‌ ತಿಂಗಳ ಜಿಎಸ್‌ಟಿಆರ್‌ 3ಬಿ ಸಲ್ಲಿಕೆಯು ಸೆಪ್ಟೆಂಬರ್‌ 30ರವರೆಗೆ 75.94 ಲಕ್ಷದಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT