ನವೆಂಬರ್, ಡಿಸೆಂಬರ್‌ಗೆ ಜಿಎಸ್‌ಟಿ: ₹1 ಲಕ್ಷ ಕೋಟಿ ಮೀರಲಿದೆ: ಹಣಕಾಸು ಸಚಿವಾಲಯ

7

ನವೆಂಬರ್, ಡಿಸೆಂಬರ್‌ಗೆ ಜಿಎಸ್‌ಟಿ: ₹1 ಲಕ್ಷ ಕೋಟಿ ಮೀರಲಿದೆ: ಹಣಕಾಸು ಸಚಿವಾಲಯ

Published:
Updated:

ನವದೆಹಲಿ: ನವೆಂಬರ್ ಮತ್ತು ಡಿಸೆಂಬರ್‌ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ ₹ 1 ಲಕ್ಷ ಕೋಟಿಯನ್ನೂ ದಾಟುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಹಬ್ಬದ ಸಂದರ್ಭದಲ್ಲಿನ ಬೇಡಿಕೆ ಹಾಗೂ ತೆರಿಗೆ ವಂಚನೆಗೆ ರೆವಿನ್ಯೂ ಇಲಾಖೆ ಕೈಗೊಂಡಿರುವ ಕ್ರಮಗಳಿಂದಾಗಿ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಕಂಡುಬರಲಿದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ವರಮಾನ ಸಂಗ್ರಹ ₹ 94,442 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ₹ 1 ಲಕ್ಷ ಕೋಟಿಯ ಗಡಿ ದಾಟಬಹುದು ಎನ್ನುವುದು ಅಧಿಕಾರಿಗಳ ನಿರೀಕ್ಷೆಯಾಗಿದೆ.

‘ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಿಗೆ ಖರೀದಿಸುತ್ತಾರೆ. ಕಂಪನಿಗಳು ಸಹ ತಮ್ಮ ಮಾರಾಟ ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ರಿಯಾಯ್ತಿ ಕೊಡುಗೆಗಳನ್ನು ನೀಡುತ್ತವೆ. ಇದರಿಂದ ಹೆಚ್ಚಿನ ವರಮಾನ ಸಂಗ್ರಹವಾಗಲಿದೆ’ ಎಂದು ಲಕ್ಷ್ಮಿಕುಮಾರನ್‌ ಆ್ಯಂಡ್‌ ಶ್ರೀಧರನ್‌ ಸಂಸ್ಥೆಯ ಪಾಲುದಾರ ಎಲ್‌. ಬದರಿ ನಾರಾಯಣನ್‌ ಹೇಳಿದ್ದಾರೆ.

‘ಸರ್ಕಾರದ ವೆಚ್ಚದ ಪ್ರಮಾಣ ತಗ್ಗಿಸಲು, ವರಮಾನ ಸಂಗ್ರಹ ಹೆಚ್ಚಿಸುವ ಮೂಲಕ ವಿತ್ತೀಯ ಕೊರತೆ ನಿಯಂತ್ರಿಸುವುದು ಉತ್ತಮ ಮಾರ್ಗವಾಗಿದೆ’ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಪಾಲುದಾರ ರಜತ್ ಮೋಹನ್‌ ಹೇಳಿದ್ದಾರೆ.

‘ವಿಪತ್ತು ತೆರಿಗೆ: ಸೂಕ್ತ ಅಲ್ಲ’: ಜಿಎಸ್‌ಟಿಯಲ್ಲಿ ಯಾವುದೇ ರೀತಿಯ ವಿಪತ್ತು ತೆರಿಗೆ ಅಥವಾ ಸೆಸ್‌ ವಿಧಿಸುವುದು ಸಮಂಜಸವಲ್ಲ. ಅದರಿಂದ ಜಿಎಸ್‌ಟಿ ಆಶಯಕ್ಕೆ ದಕ್ಕೆಯಾಗಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಐಎಟಿ) ಹೇಳಿದೆ.

ಈ ನಿರ್ಧಾರ ಒಂದು ತೆರಿಗೆ ಒಂದು ದೇಶ ಎನ್ನುವ ಮೂಲತತ್ವಕ್ಕೆ ವಿರುದ್ಧವಾಗಿದೆ. ಹೀಗಾಗಿ ಕೇರಳಕ್ಕೆ ನೆರವು ನೀಡಲು ಬೇರೆ ಮಾರ್ಗ ಪರಿಗಣಿಸುವಂತೆ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.

ತಂತ್ರಾಂಶದಲ್ಲಿಯೂ ಕೆಲವು ಬದಲಾವಣೆಗಳನ್ನು ತರಬೇಕಾಗಿ ಬರಲಿದ್ದು, ಇದರಿಂದ ಸರ್ಕಾರ ಮತ್ತು ವರ್ತಕರಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !