ಶನಿವಾರ, ಮಾರ್ಚ್ 28, 2020
19 °C

ಜಿಎಸ್‌ಟಿ | ₹7,896 ಕೋಟಿ ಮೊತ್ತದ ನಕಲಿ ಇನ್‌ವಾಯ್ಸ್‌ ಜಾಲ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 23 ವಂಚಕ ಕಂಪನಿಗಳ ಮೂಲಕ ₹ 7,896 ಕೋಟಿ ಮೊತ್ತದ ನಕಲಿ ಇನ್‌ವಾಯ್ಸ್‌ ಸೃಷ್ಟಿಸುತ್ತಿದ್ದ ಜಾಲವನ್ನು ದೆಹಲಿಯ ಜಿಎಸ್‌ಟಿ ಅಧಿಕಾರಿಗಳು ಬೇಧಿಸಿದ್ದಾರೆ.

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ನ (ಐಟಿಸಿ) ₹ 1,709 ಕೋಟಿ ಮೊತ್ತವನ್ನೂ ಒಳಗೊಂಡು ಒಟ್ಟಾರೆ ₹ 7,896 ಕೋಟಿ ಮೊತ್ತದ ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ವಂಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕಂಪನಿಗಳು ಪೂರೈಕೆ ಮಾಡಿರುವ ಸರಕುಗಳ ನಿಜವಾದ ಇನ್‌ವಾಯ್ಸ್ ಸೃಷ್ಟಿದೇ ವಂಚಿಸಿವೆ. ಈ ಸಂಬಂಧ ಫೆಬ್ರುವರಿ 29ರಂದು ಇಬ್ಬರನ್ನು ಬಂಧಿಸಲಾಗಿದ್ದು, 14ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

ಅಸ್ತಿತ್ವದಲ್ಲಿ ಇಲ್ಲದೆ, ಕೇವಲ ದಾಖಲೆಗಳಿಗಾಗಿ ಕೆಲವು ಕಂಪನಿಗಳನ್ನು ಹೆಸರಿಸಿ, ನಕಲಿ ಇನ್‌ವಾಯ್ಸ್‌ ಸೃಷ್ಟಿಸುವ ಮೂಲಕ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದು ವಂಚಿಸಲಾಗುತ್ತಿದೆ ಎನ್ನುವ ಆರೋಪ ಮಾಡಲಾಗಿದೆ.

ಐಟಿಸಿಯನ್ನು ಅಸಲಿಯ ರೀತಿ ಕಾಣುವಂತೆ ಮಾಡಲು ಬ್ಯಾಂಕಿಂಗ್‌ ವಹಿವಾಟನ್ನೂ ನಡೆಸುತ್ತಿದ್ದರು. ಈ ಕಂಪನಿಗಳು ಖರೀದಿದಾರರಿಗೆ ನಕಲಿ ಇನ್‌ವಾಯ್ಸ್‌ ನೀಡುತ್ತಿದ್ದವು ಎಂದೂ ಸಚಿವಾಲಯ ಮಾಹಿತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು