ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಲ್ಲಿ ₹ 1.31 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಜಿಎಸ್‌ಟಿ ಅನುಷ್ಠಾನಕ್ಕೆ ಬಂದ ನಂತರ ಸಂಗ್ರಹ ಆಗಿರುವ ಎರಡನೆಯ ಅತಿ ಹೆಚ್ಚಿನ ಮೊತ್ತ
Last Updated 1 ಡಿಸೆಂಬರ್ 2021, 11:16 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ನವೆಂಬರ್‌ನಲ್ಲಿ ₹ 1.31 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ.ಜಿಎಸ್‌ಟಿ ವ್ಯವಸ್ಥೆಯು 2017 ಏಪ್ರಿಲ್‌ನಲ್ಲಿ ಅನುಷ್ಠಾನಕ್ಕೆ ಬಂದ ನಂತರ ಸಂಗ್ರಹ ಆಗಿರುವ ಎರಡನೆಯ ಅತಿಹೆಚ್ಚಿನ ಮೊತ್ತ ಇದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ.

ಜಿಎಸ್‌ಟಿ ವರಮಾನ ಸಂಗ್ರಹವುಜುಲೈ ತಿಂಗಳಿನಿಂದಲೂ ₹ 1 ಲಕ್ಷ ಕೋಟಿಗಿಂತಲೂ ಹೆಚ್ಚಿನ ಮಟ್ಟದಲ್ಲಿ ಇದೆ. ನವೆಂಬರ್‌ನಲ್ಲಿ ಆಗಿರುವ ಜಿಎಸ್‌ಟಿ ವರಮಾನ ಸಂಗ್ರಹವು ಕಳೆದ ವರ್ಷದ ನವೆಂಬರ್‌ಗೆ ಹೋಲಿಸಿದರೆ ಶೇ 25ರಷ್ಟು ಏರಿಕೆ ಆಗಿದೆ. 2019ರ ನವೆಂಬರ್‌ಗೆ ಹೋಲಿಸಿದರೆ ಶೇ 27ರಷ್ಟು ಹೆಚ್ಚಾಗಿದೆ. 2021ರ ಏಪ್ರಿಲ್‌ನಲ್ಲಿ ₹ 1.41 ಲಕ್ಷ ಕೋಟಿಗಳಷ್ಟು ಜಿಎಸ್‌ಟಿ ವರಮಾನ ಸಂಗ್ರಹ ಆಗಿದ್ದು, ಇದು ಈವರೆಗಿನ ಅತಿ ಹೆಚ್ಚಿನ ಮೊತ್ತವಾಗಿದೆ.

ನವೆಂಬರ್‌ನಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ಸಿಜಿಎಸ್‌ಟಿ ₹ 23,978 ಕೋಟಿ, ಎಸ್‌ಜಿಎಸ್‌ಟಿ ₹ 31,127 ಕೋಟಿ, ಐಜಿಎಸ್‌ಟಿ ₹ 66,815 ಕೋಟಿ ಮತ್ತು ಸೆಸ್‌ ₹ 9,606 ಕೋಟಿಗಳಷ್ಟಾಗಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಜಿಎಸ್‌ಟಿಗೆ ಸಂಬಂಧಿಸಿದಂತೆ ತಂದಿರುವ ಆಡಳಿತಾತ್ಮಕ ಬದಲಾವಣೆಗಳು ಮತ್ತು ನೀತಿಯಲ್ಲಿನ ಸುಧಾರಣಾ ಕ್ರಮಗಳಿಂದಾಗಿಯೇ ಈಚಿನ ತಿಂಗಳುಗಳಲ್ಲಿ ಜಿಎಸ್‌ಟಿ ವರಮಾನ ಸಂಗ್ರಹದಲ್ಲಿ ಈ ಪ್ರಮಾಣದ ಏರಿಕೆಗೆ ಕಾರಣವಾಗಿದೆ ಎಂದು ಅದು ಹೇಳಿದೆ.

ತೆರಿಗೆ ಸಂಗ್ರಹ ವಿವರ

ಏಪ್ರಿಲ್‌;₹ 1.41 ಲಕ್ಷ ಕೋಟಿ

ಮೇ;₹ 1.02 ಲಕ್ಷ ಕೋಟಿ

ಜೂನ್‌;₹ 92,849 ಕೋಟಿ

ಜುಲೈ;₹ 1.16 ಲಕ್ಷ ಕೋಟಿ

ಆಗಸ್ಟ್‌;₹ 1.12 ಲಕ್ಷ ಕೋಟಿ

ಸೆಪ್ಟೆಂಬರ್‌;₹ 1.17 ಲಕ್ಷ ಕೋಟಿ

ಅಕ್ಟೋಬರ್;₹ 1.30 ಲಕ್ಷ ಕೋಟಿ

ನವೆಂಬರ್‌; ₹1.31 ಲಕ್ಷ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT