ನವದೆಹಲಿ: ನಿನ್ನೆ ನಮ್ಮ ಸರ್ಕಾರ ಜಿಎಸ್ಟಿ ವಿಚಾರವಾಗಿ ಕೈಗೊಂಡಿರುವ ನಿರ್ಧಾರ ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ನಡೆದ ಅತಿದೊಡ್ಡ ಮತ್ತು ಕ್ರಾಂತಿಕಾರಕ ತೆರಿಗೆ ಸುಧಾರಣೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಗುರುವಾರ ನವದೆಹಲಿಯಲ್ಲಿ ನಡೆದ India MedTech Expo 2025 ಹಾಗೂ IPHEX 2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲ ತರಹದ ಕೈಗಾರಿಕೆಗಳು ಜಿಎಸ್ಟಿ ಸ್ಲ್ಯಾಬ್ಗಳ ಸುಧಾರಣೆಯ ಲಾಭವನ್ನು ಗ್ರಾಹಕರಿಗೆ ಚಾಚುತಪ್ಪದೆ ವರ್ಗಾಯಿಸಬೇಕು. ಇಲ್ಲದೇ ಹೋದರೆ ಜಿಎಸ್ಟಿ ಸುಧಾರಣೆಗೆ ಅರ್ಥವೇ ಇರುವುದಿಲ್ಲ ಎಂದು ಕೈಗಾರಿಕೆಗಳ ಕಿವಿ ಹಿಂಡಿದ್ದಾರೆ.

ಜಿಎಸ್ಟಿ ಸುಧಾರಣೆಯು ದೇಶದ ಅರ್ಥ ವ್ಯವಸ್ಥೆಯಲ್ಲಿ ಭಾರಿ ಬೇಡಿಕೆಗಳನ್ನು ಸೃಷ್ಟಿಸಲಿದೆ. ಇದರಿಂದ ಉತ್ಪಾದನೆ ಹೆಚ್ಚಾಗಿ ಆರ್ಥಿಕ ಪ್ರಗತಿಗೆ ಹೊಸ ರಾಜಮಾರ್ಗ ಸಿಗಲಿದೆ ಎಂದು ಬಣ್ಣಿಸಿದ್ದಾರೆ.

ಇದರಿಂದ ಮುಂದಿನ ಎರಡು ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆ ಗುರಿ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್ಟಿ ಮಂಡಳಿ ಬುಧವಾರ ತೆಗೆದುಕೊಂಡಿತ್ತು.
.Next-Gen GST | ಜಿಎಸ್ಟಿ ಪರಿಷ್ಕರಣೆ: ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲ ಕಡಿತ?.ಜಿಎಸ್ಟಿ ಕಡಿತ | ಗೂಳಿ ಓಟ: ಸೆನ್ಸೆಕ್ಸ್ 900 ಅಂಶ ಏರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.