ನವದೆಹಲಿ: ಭಾರತದ ಗ್ರಾಹಕರು ಹೊಸ ಹುರುಪು ಮತ್ತು ವಿಶ್ವಾಸದೊಂದಿಗೆ ಹಬ್ಬದ ಋತುವನ್ನು ಬರಮಾಡಿಕೊಂಡಿದ್ದಾರೆ, ಹಣಕಾಸಿನ ವಿಚಾರವಾಗಿ ಅವರಲ್ಲಿ ಹೊಸ ಆಶಾವಾದ ಮೂಡಿದೆ ಎಂದು ಡೆಲಾಯ್ಟ್ ಇಂಡಿಯಾ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

‘ಹಣದುಬ್ಬರದ ಪ್ರಮಾಣವು ಕಡಿಮೆ ಆಗಿದೆ, ಈಚೆಗೆ ಜಾರಿಗೆ ಬಂದಿರುವ ಜಿಎಸ್ಟಿ ದರ ಪರಿಷ್ಕರಣೆ ಕ್ರಮವು ಗ್ರಾಹಕರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿದೆ. ಈ ಸಂದರ್ಭದಲ್ಲಿ ಬಂದಿರುವ ಹಬ್ಬಗಳ ಖುಷಿಯು ಬೇಡಿಕೆಯ ಹೊಸ ಅಲೆಯನ್ನು ಸೃಷ್ಟಿಸಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದ ಹಣಕಾಸಿನ ಆರೋಗ್ಯ ಸೂಚ್ಯಂಕವು (ಎಫ್ಡಬ್ಲ್ಯುಬಿಐ) ಸೆಪ್ಟೆಂಬರ್ನಲ್ಲಿ 110.3ಕ್ಕೆ ಏರಿಕೆ ಆಗಿದೆ. ಇದು ಜಾಗತಿಕ ಸರಾಸರಿಯಾದ 103.6ಕ್ಕಿಂತ ಹೆಚ್ಚು. ಕೌಟುಂಬಿಕ ಮಟ್ಟದಲ್ಲಿ ಹಣಕಾಸಿನ ಸ್ಥಿರತೆ ಹೆಚ್ಚಾಗಿರುವುದನ್ನು ಹಾಗೂ ಗ್ರಾಹಕರಲ್ಲಿ ಆಶಾಭಾವ ಹೆಚ್ಚಿರುವುದನ್ನು ಇದು ಸೂಚಿಸುತ್ತಿದೆ.

ಆಹಾರ ಮಿತವ್ಯಯ ಸೂಚ್ಯಂಕವು (ಎಫ್ಎಫ್ಐ) ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿರುವುದು ವರದಿಯಲ್ಲಿನ ಪ್ರಮುಖ ಅಂಶಗಳ ಪೈಕಿ ಒಂದು. ಈ ಸೂಚ್ಯಂಕವು ಈಗ ಮೂರು ವರ್ಷಗಳ ಎರಡನೆಯ ಕನಿಷ್ಠ ಮಟ್ಟದಲ್ಲಿ ಇದೆ. ಅಂದರೆ ಗ್ರಾಹಕರು ಖರೀದಿಯ ಸಂದರ್ಭದಲ್ಲಿ ಬಹಳ ಲೆಕ್ಕಾಚಾರ ಹಾಕುತ್ತಿಲ್ಲ. ಅದರ ಬದಲಿಗೆ ಅವರು, ಉತ್ತಮ ಮೌಲ್ಯದ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ.

ವಾಹನ ಖರೀದಿ ಉದ್ದೇಶವನ್ನು ಹೇಳುವ ಸೂಚ್ಯಂಕವು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದ್ದ ಮಟ್ಟಕ್ಕೆ ಹೋಲಿಸಿದರೆ ಶೇಕಡ 6.6ರಷ್ಟು ಹೆಚ್ಚಳ ಕಂಡಿದೆ. ಅಂದರೆ, ದೊಡ್ಡ ಮೊತ್ತದ ಖರ್ಚುಗಳನ್ನು ಮಾಡುವ ವಿಶ್ವಾಸವು ಜನರಲ್ಲಿ ಹೆಚ್ಚಾಗಿದೆ ಎಂಬುದನ್ನು ಇದು ಹೇಳುತ್ತಿದೆ. ವಿದ್ಯುತ್ ಚಾಲಿತ (ಇ.ವಿ) ವಾಹನದ ಬಗ್ಗೆ ಒಲವು ಹೆಚ್ಚಾಗಿದೆ, ಶೇ 60ರಷ್ಟು ಗ್ರಾಹಕರು ಇ.ವಿ.ಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರವಾಸ, ಮನರಂಜನೆ, ವೈಯಕ್ತಿಕ ಆರೈಕೆಯಂತಹ ಉದ್ದೇಶಗಳಿಗೆ ವೆಚ್ಚ ಮಾಡುವುದು ಹೆಚ್ಚಾಗುತ್ತಿದೆ. ಹಣದುಬ್ಬರ ಕಡಿಮೆ ಆಗಿರುವುದು ಹಾಗೂ ಜಿಎಸ್ಟಿ ದರವನ್ನು ತಗ್ಗಿಸಿರುವುದು ಈ ವೆಚ್ಚಗಳಿಗೆ ಪೂರಕವಾಗಿ ಒದಗಿಬಂದಿದೆ ಎಂದು ವರದಿಯು ವಿವರಿಸಿದೆ.

ಭಾರತದ ಗ್ರಾಹಕರು ಈಗ ಹಣಕಾಸಿನ ವಿಚಾರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವಿಶ್ವಾಸ ಹೊಂದಿದ್ದಾರೆ ಎಂದು ಡೆಲಾಯ್ಟ್ ಸಂಸ್ಥೆಯ ದಕ್ಷಿಣ ಭಾರತ ವಲಯದ ಪಾಲುದಾರ ಆನಂದ್ ರಾಮನಾಥನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.