ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ದಿನ: ದೂರವಿರಲು ಸೂಪರ್‌ಇಂಟೆಂಡೆಂಟ್‌ಗಳ ತೀರ್ಮಾನ

Last Updated 30 ಜೂನ್ 2022, 16:23 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ತೆರಿಗೆ ಸೂಪರ್‌ಇಂಟೆಂಡೆಂಟ್‌ಗಳು ಶುಕ್ರವಾರ ನಡೆಯಲಿರುವ ಜಿಎಸ್‌ಟಿ ದಿನಾಚರಣೆಯಿಂದ ದೂರ ಉಳಿಯಲಿದ್ದಾರೆ ಎಂದು ಅಖಿಲ ಭಾರತ ಕೇಂದ್ರ ತೆರಿಗೆ ಸೂಪರ್‌ಇಂಟೆಂಡೆಂಟ್‌ಗಳ ಸಂಘ ಹೇಳಿದೆ.

ಮೂಲಸೌಕರ್ಯ, ಕರ್ತವ್ಯ, ಜವಾಬ್ದಾರಿ, ವೇತನ ಶ್ರೇಣಿ ವಿಚಾರದಲ್ಲಿ ಕೇಂದ್ರ ಜಿಎಸ್‌ಟಿ ಸಂಘಟನೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜಿಎಸ್‌ಟಿ ಸಂಘಟನೆಗಳಿಗೆ ಸಮಾನವಾಗಿ ಕಾಣುತ್ತಿಲ್ಲ. ಹೆಚ್ಚಿನ ಜವಾಬ್ದಾರಿಯನ್ನು ಸೂಪರ್‌ಇಂಟೆಂಡೆಂಟ್‌ಗಳ ಮೇಲೆ ಹೊರಿಸಲಾಗುತ್ತಿದ್ದರೂ ಅವರಿಗೆ ಯಾವುದೇ ನೆರವು ಸಿಗುತ್ತಿಲ್ಲ ಎಂದು ಸಂಘಟನೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಜಿಎಸ್‌ಟಿ ಅಧಿಕಾರಿಗಳಿಗೆ ಒದಗಿಸಿರುವ ಸಾಫ್ಟ್‌ವೇರ್‌ ಸೌಲಭ್ಯವು ಉತ್ತಮವಾಗಿಲ್ಲ. ವ್ಯವಸ್ಥೆಯ ಗಣಕೀಕರಣ ಪ್ರಕ್ರಿಯೆಯು ಒಂದು ವೈಫಲ್ಯದಂತೆ ಕಾಣುತ್ತಿದೆ. ಸಹಾಯಕ ಆಯುಕ್ತರ ಎರಡು ಸಾವಿರಕ್ಕೂ ಹೆಚ್ಚು ಹುದ್ದೆಗಳ್ನು ಭರ್ತಿ ಮಾಡಿಲ್ಲ. 2007ರಿಂದಲೂ ಸೂಪರ್‌ಇಂಟೆಂಡೆಂಟ್‌ಗಳ ಅಖಿಲ ಭಾರತ ಜೇಷ್ಠತಾ ಪಟ್ಟಿ ಸಿದ್ಧಪಡಿಸಿಲ್ಲ ಎಂದು ಸಂಘಟನೆಯು ಆರೋಪಿಸಿದೆ.

ಪರಿಸ್ಥಿತಿ ಹೀಗಿರುವಾಗ ಕೇಂದ್ರ ತೆರಿಗೆ ಸೂಪರ್‌ಇಂಟೆಂಡೆಂಟ್‌ಗಳಿಗೆ ಜಿಎಸ್‌ಟಿ ದಿನಾಚರಣೆಯಂದು ಸಂಭ್ರಮಿಸಲು ಕಾರಣಗಳೇ ಇಲ್ಲ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT