ಮುಂಬೈ: 2023ರ ಹಣಕಾಸು ವರ್ಷದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ನ ಶಶಿಧರ್ ಜಗದೀಶನ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಾಹಕರಾಗಿ ಹೊರಹೊಮ್ಮಿದ್ದಾರೆ. ಅವರ ಒಟ್ಟಾರೆ ವಾರ್ಷಿಕ ವೇತನ ₹10.55 ಕೋಟಿ ಆಗಿದೆ.

ಜಗದೀಶನ್ ಅವರ ಸಹೋದ್ಯೋಗಿ ಉಪ ವ್ಯವಸ್ಥಾಪಕ ನಿರ್ದೇಶಕ ಕೈಜಾದ್ ಭರುಚಾ, ₹10 ಕೋಟಿ ಸಂಭಾವನೆ ಪಡೆಯುತ್ತಿದ್ದು, ದೇಶದ ಎರಡನೇ ಅತಿ ಹೆಚ್ಚು ವೇತನ ಪಡೆಯುತ್ತಿರುವ ಬ್ಯಾಂಕ್ ಉದ್ಯೋಗಿಯಾಗಿರಬಹುದು ಎಂದು ವರದಿ ತಿಳಿಸಿದೆ.

ಬ್ಯಾಂಕ್ ಸಿಇಒಗಳ ಪೈಕಿ, ಆಕ್ಸಿಸ್ ಬ್ಯಾಂಕ್ನ ಅಮಿತಾಭ್ ಚೌಧರಿ ಅವರು ₹9.75 ಕೋಟಿ, ಐಸಿಐಸಿಐ ಬ್ಯಾಂಕ್ನ ಸಂದೀಪ್ ಭಕ್ಷಿ ಅವರು ₹9.60 ಕೋಟಿ ವೇತನದೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಕೋಟಕ್ ಮಹೀಂದ್ರಾ ಬ್ಯಾಂಕ್ನ ಶೇಕಡ 26ರಷ್ಟು ಷೇರನ್ನು ಹೊಂದಿರುವ ಉದಯ್ ಕೋಟಕ್, ಕೋವಿಡ್ ಹೊಡೆತದ ಹಿನ್ನೆಲೆಯಲ್ಲಿ ₹1 ಸಂಭಾವನೆ ಪಡೆಯಲು ಆರಂಭಿಸಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ.

ಜಗದೀಶನ್ ಅವರ ಸಂಭಾವನೆಯಲ್ಲಿ ₹2.82ಕೋಟಿ ಬೇಸಿಕ್, ₹3.31 ಕೋಟಿ ಅಲೊಯನ್ಸ್, ₹33.92 ಲಕ್ಷ ಪಿಎಫ್, ಮತ್ತು ₹3.63 ಪರ್ಫಾಮೆನ್ಸ್ ಬೋನಸ್ ಸೇರಿದೆ.

ಜಗದೀಶನ್ ಅವರ ವೇತನದ ಹೆಚ್ಚಳ ಸುಮಾರು ಶೇಕಡ 62ರಷ್ಟಾಗಿದೆ. 2022ರಲ್ಲಿ ಅವರು ₹6.51 ಕೋಟಿ ಸಂಬಳ ಪಡೆಯುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.