ಸೋಮವಾರ, ಸೆಪ್ಟೆಂಬರ್ 27, 2021
23 °C

ದ್ವಿಚಕ್ರ ವಾಹನದ ಬೆಲೆ ತಗ್ಗಿಸಿದ ಹೀರೊ ಎಲೆಕ್ಟ್ರಿಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೀರೊ ಎಲೆಕ್ಟ್ರಿಕ್‌ ಕಂಪನಿಯು ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬೆಲೆಯನ್ನು ಗರಿಷ್ಠ ಶೇಕಡ 33ರವರೆಗೆ ಇಳಿಕೆ ಮಾಡಿದೆ. ಫೇಮ್‌–2 ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಕೆಲವು ಸಬ್ಸಿಡಿಗಳನ್ನು ಘೋಷಿಸಿದ ಬೆನ್ನಲ್ಲೇ ಕಂಪನಿ ಈ ಕ್ರಮ ಕೈಗೊಂಡಿದೆ.

ಬೆಲೆ ಇಳಿಕೆಯ ನಂತರ ಫೋಟೊನ್ ಎಚ್‌ಎಕ್ಸ್‌ ಮಾದರಿಯ ಬೆಲೆಯು ₹ 71,449 ಆಗಿದೆ (ಮೊದಲಿನ ಬೆಲೆ ₹ 79,940). ಮೂರು ಬ್ಯಾಟರಿಗಳು ಇರುವ ಎನ್‌ವೈಎಕ್ಸ್‌ ಎಚ್‌ಎಕ್ಸ್‌ ದ್ವಿಚಕ್ರ ವಾಹನದ ಬೆಲೆಯು ₹ 85,136ಕ್ಕೆ ತಗ್ಗಿದೆ (ಮೊದಲಿನ ಬೆಲೆ ₹ 1.13 ಲಕ್ಷ).

ಆಪ್ಟಿಮಾ ಇಆರ್‌ ಮಾದರಿಯ ಬೆಲೆಯು ₹ 58,980ಕ್ಕೆ ಇಳಿದಿದೆ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು