ಫ್ಲ್ಯಾಟ್‌ ಮಾರಾಟ ಬೆಲೆ ಹೆಚ್ಚಳ

ಭಾನುವಾರ, ಜೂಲೈ 21, 2019
27 °C
ನ್ಯಾಷನಲ್‌ ಹೌಸಿಂಗ್ ಬ್ಯಾಂಕ್‌ ವರದಿಯಲ್ಲಿ ಮಾಹಿತಿ

ಫ್ಲ್ಯಾಟ್‌ ಮಾರಾಟ ಬೆಲೆ ಹೆಚ್ಚಳ

Published:
Updated:
Prajavani

ನವದೆಹಲಿ: ದೇಶದ 50 ಪ್ರಮುಖ ನಗರಗಳಲ್ಲಿನ ಫ್ಲ್ಯಾಟ್‌ಗಳ ಖರೀದಿ ಬೆಲೆಯು ಶೇ 6ರಷ್ಟು ಏರಿಕೆ ದಾಖಲಿಸಿದೆ.

2018ರ ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ, ಅದಕ್ಕೂ ಒಂದು ವರ್ಷದ ಹಿಂದಿನ ಮಾರಾಟದ ಬೆಲೆಗಳಿಗೆ ಹೋಲಿಸಿದರೆ   ಫ್ಲ್ಯಾಟ್‌ಗಳು ದುಬಾರಿಯಾಗಿರುವುದು ನ್ಯಾಷನಲ್‌ ಹೌಸಿಂಗ್ ಬ್ಯಾಂಕ್‌ನ (ಎನ್‌ಎಚ್‌ಬಿ) ಫ್ಲ್ಯಾಟ್‌ಗಳ ಬೆಲೆ ಸೂಚ್ಯಂಕವಾಗಿರುವ ‘ರೆಸಿಡೆಕ್ಸ್‌’ ನಲ್ಲಿ ದಾಖಲಾಗಿದೆ.

ಈ ಸೂಚ್ಯಂಕವು ಫ್ಲ್ಯಾಟ್‌ಗಳ ಬೆಲೆ ಏರಿಳಿತದ ಮೇಲೆ ನಿಗಾ ಇರಿಸಿದೆ. ದೇಶದ ಆಯ್ದ ನಗರಗಳಲ್ಲಿನ ವಸತಿ ನಿರ್ಮಾಣ ಯೋಜನೆಗಳ ಬೆಲೆ ಏರಿಳಿತವನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಈ ಸೂಚ್ಯಂಕವು ದಾಖಲಿಸುತ್ತದೆ. ಹಿಂದಿನ ವರ್ಷದ ಅಕ್ಟೋಬರ್‌ – ಡಿಸೆಂಬರ್‌ ತ್ರೈಮಾಸಿಕದಲ್ಲಿ ಈ ಸೂಚ್ಯಂಕವು ಶೇ 6ರಷ್ಟು ಏರಿಕೆ ದಾಖಲಿಸಿದೆ ಎಂದು ‘ಎನ್‌ಎಚ್‌ಬಿ’ ಹೇಳಿಕೆಯಲ್ಲಿ ತಿಳಿಸಿದೆ.

ಫ್ಲ್ಯಾಟ್‌ಗಳ ಬೆಲೆ ಸೂಚ್ಯಂಕವು ವರ್ಷದಿಂದ ವರ್ಷಕ್ಕೆ ಒಟ್ಟಾರೆ 44 ನಗರಗಳಲ್ಲಿ ಹೆಚ್ಚಳಗೊಂಡಿದೆ. ಕೇವಲ 4 ನಗರಗಳಲ್ಲಿ ಇಳಿಕೆಯಾಗಿದೆ. 2 ನಗರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !