ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಗತಿಕ ವಿ.ವಿಗಳಿಗೆ ನೇರ ಶುಲ್ಕ ಪಾವತಿ ವ್ಯವಸ್ಥೆ

Published : 16 ಸೆಪ್ಟೆಂಬರ್ 2024, 15:20 IST
Last Updated : 16 ಸೆಪ್ಟೆಂಬರ್ 2024, 15:20 IST
ಫಾಲೋ ಮಾಡಿ
Comments

ನವದೆಹಲಿ: ಭಾರತೀಯ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ನೇರವಾಗಿ ಶುಲ್ಕ ಪಾವತಿಗೆ ಅನುಕೂಲ ಕಲ್ಪಿಸಲು ಜಾಗತಿಕ ಶೈಕ್ಷಣಿಕ ಪಾವತಿ ವ್ಯವಸ್ಥೆಯನ್ನು ಎಚ್‌ಎಸ್‌ಬಿಸಿ ಬ್ಯಾಂಕ್‌ ಇಂಡಿಯಾ ಸೋಮವಾರ ಆರಂಭಿಸಿದೆ.

ವಿದೇಶಿ ಕರೆನ್ಸಿ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ಸಾಗರೋತ್ತರ ಶಿಕ್ಷಣದ ಬೋಧನಾ ಶುಲ್ಕ ಪಾವತಿ ವೇಳೆ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರಿಗೆ ಸಂಪೂರ್ಣ ಡಿಜಿಟಲ್‌ ಅನುಭವವನ್ನು ನೀಡಲಿದೆ ಎಂದು ಬ್ಯಾಂಕ್‌ ತಿಳಿಸಿದೆ. 

ಬ್ಯಾಂಕ್‌ನ ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಷನ್‌ನಲ್ಲಿ ದೇಶ ಮತ್ತು ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಂಡು, ವಿದ್ಯಾರ್ಥಿಗಳು ತಮ್ಮ ಮಾಹಿತಿ ಹಾಗೂ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಪಾವತಿಯನ್ನು ಸುರಕ್ಷಿತವಾಗಿ ಮಾಡಬಹುದಾಗಿದೆ. ಇತರೆ ಅಂತರರಾಷ್ಟ್ರೀಯ ಶೈಕ್ಷಣಿಕ ಪಾವತಿ ಆಯ್ಕೆಗಳಿಗೆ ಹೋಲಿಸಿದರೆ ರವಾನೆ ವೆಚ್ಚ ಕಡಿಮೆ ಇದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT