ಮುಂಬೈ: ಮುಂಬೈನಲ್ಲಿ 330 ಕೊಠಡಿಗಳು ಇರುವ ಹೊಸ ಹೋಟೆಲ್ ನಿರ್ಮಿಸಲಾಗುವುದು. ಇದಕ್ಕಾಗಿ ₹2,500 ಕೋಟಿ ಹೂಡಿಕೆ ಮಾಡಲಾಗುತ್ತಿದೆ ಎಂದು ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಕಂಪನಿ (ಐಎಚ್ಸಿಎಲ್) ಸೋಮವಾರ ತಿಳಿಸಿದೆ.

‘ತಾಜ್ ಬ್ಯಾಂಡ್ಸ್ಟ್ಯಾಂಡ್’ ಹೆಸರಿನ ಹೊಸ ಕಟ್ಟಡದ ನಿರ್ಮಾಣ ಈ ವರ್ಷ ಆರಂಭವಾಗಲಿದ್ದು, ಮೂರು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಐಎಚ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಪುನೀತ್ ಛತ್ವಾಲ್ ಹೇಳಿದ್ದಾರೆ.

ಇದರ ನಿರ್ಮಾಣದಿಂದ ನೇರವಾಗಿ 1 ಸಾವಿರ ಜನರಿಗೆ ಮತ್ತು ಪರೋಕ್ಷವಾಗಿ 7 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರ ಸಮ್ಮುಖದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಶಿಲಾನ್ಯಾಸ ಸಮಾರಂಭ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.