ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಲ್ಲಿ ಸಕಾರಾತ್ಮಕ ಹಾದಿಗೆ ಕೈಗಾರಿಕಾ ಚಟುವಟಿಕೆ

Last Updated 12 ಮೇ 2021, 14:45 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಎರಡು ತಿಂಗಳುಗಳ ಬಳಿಕ ಮತ್ತೆ ಸಕಾರಾತ್ಮಕ ಹಾದಿಗೆ ಮರಳಿದೆ. ಗಣಿಗಾರಿಕೆ ಮತ್ತು ವಿದ್ಯುತ್ ವಲಯಗಳ ಉತ್ತಮ ಬೆಳವಣಿಗೆಯಿಂದಾಗಿ ಮಾರ್ಚ್‌ನಲ್ಲಿ ಚೇತರಿಕೆ ಕಂಡುಕೊಂಡಿದೆ.

ಕೈಗಾರಿಕಾ ಉತ್ಪದನಾ ಚಟುವಟಿಕೆಯು ಮಾರ್ಚ್‌ನಲ್ಲಿ ಶೇಕಡ 22.4ರಷ್ಟು ಬೆಳವಣಿಗೆ ಕಂಡಿದೆ. 2020ರ ಮಾರ್ಚ್‌ನಲ್ಲಿ ಶೇ 18.7ರಷ್ಟು ಕುಸಿತ ಕಂಡಿತ್ತು. ಈ ವರ್ಷದ ಜನವರಿ ಮತ್ತು ಮಾರ್ಚ್‌ನಲ್ಲಿ ಕ್ರಮವಾಗಿ ಶೇ 0.9ರಷ್ಟು ಮತ್ತು ಶೇ 3.4ರಷ್ಟು ಇಳಿಕೆ ಕಂಡಿತ್ತು.

ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ (ಐಐಪಿ) ಶೇ 77.63ರಷ್ಟು ಪಾಲು ಹೊಂದಿರುವ ತಯಾರಿಕಾ ವಲಯದ ಬೆಳವಣಿಗೆಯು ಮಾರ್ಚ್‌ನಲ್ಲಿ ಶೇ 25.8ರಷ್ಟಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಈ ಮಾಹಿತಿ ಬಿಡುಗಡೆ ಮಾಡಿದೆ.

2020–21ರಲ್ಲಿ ಐಐಪಿಯು ಶೇ 8.6ರಷ್ಟು ಇಳಿಕೆ ಕಂಡಿದೆ. 2019–20ರಲ್ಲಿ ಶೇ 0.8ರಷ್ಟು ಇಳಿಕೆ ಕಂಡಿತ್ತು.

ಚಿಲ್ಲರೆ ಹಣದುಬ್ಬರ ಇಳಿಕೆ: ಮಾರ್ಚ್‌ನಲ್ಲಿ ಶೇ 5.52ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನ‌ಲ್ಲಿ ಶೇ 4.29ಕ್ಕೆ ಇಳಿಕೆ ಕಂಡಿದೆ. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಆಹಾರ ಉತ್ಪನ್ನಗಳ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 4.87ರಷ್ಟು ಇದ್ದಿದ್ದು ಏಪ್ರಿಲ್‌ನಲ್ಲಿ ಶೇ 2.02ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT