ಭಾನುವಾರ, ಫೆಬ್ರವರಿ 28, 2021
20 °C

ಶೇ 11.5ರಷ್ಟು ಬೆಳವಣಿಗೆ ಕಾಣಲಿರುವ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: 2021ರಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 11.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ. ಐಎಂಎಫ್‌ ಅಂದಾಜಿನ ಪ್ರಕಾರ, ಈ ವರ್ಷದಲ್ಲಿ ವಿಶ್ವದಲ್ಲಿ ಎರಡು ಅಂಕಿಗಳ ಬೆಳವಣಿಗೆಯನ್ನು ಸಾಧಿಸುವ ಪ್ರಮುಖ ಅರ್ಥ ವ್ಯವಸ್ಥೆ ಭಾರತದ್ದು ಮಾತ್ರ.

ಭಾರತದ ನಂತರದ ಸ್ಥಾನದಲ್ಲಿ ಚೀನಾ (ಶೇ 8.1ರಷ್ಟು ಬೆಳವಣಿಗೆ ಸಾಧಿಸುವ ಅಂದಾಜು), ಸ್ಪೇನ್ (ಶೇ 5.9ರಷ್ಟು) ಮತ್ತು ಫ್ರಾನ್ಸ್ (ಶೇ 5.5) ಇವೆ. 2020ರಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇ (–) 8ರಷ್ಟು ಕುಸಿತ ಕಂಡಿರುವ ಅಂದಾಜು ಇದೆ ಎಂದು ಐಎಂಎಫ್ ಹೇಳಿದೆ. 2020ರಲ್ಲಿ ಬೆಳವಣಿಗೆ ಸಾಧಿಸಿರುವ ಪ್ರಮುಖ ಅರ್ಥ ವ್ಯವಸ್ಥೆ ಚೀನಾದ್ದು ಮಾತ್ರ.

2022ರಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇ 6.8ರಷ್ಟು ಬೆಳವಣಿಗೆ ಕಾಣಲಿದೆ, ಚೀನಾದ ಅರ್ಥ ವ್ಯವಸ್ಥೆ ಶೇ 5.6ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ. ಹೊಸದಾಗಿ ಮಾಡಿರುವ ಅಂದಾಜಿನ ಕಾರಣದಿಂದಾಗಿ, ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಅರ್ಥ ವ್ಯವಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಮತ್ತೆ ಪಡೆದುಕೊಂಡಂತೆ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು