ನವದೆಹಲಿ: ಆದಾಯ ತೆರಿಗೆ ಮಸೂದೆ 2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

ಇದೀಗ ಮಸೂದೆ ಕಾಯ್ದೆ ಆಗಿದೆ. ಈ ಕಾಯ್ದೆ ಮುಂದಿನ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಕಾಯ್ದೆಯು ತೆರಿಗೆ ಕಾನೂನುಗಳನ್ನು ಸರಳಗೊಳಿಸಲಿದ್ದು, ಪದಗಳನ್ನು ಕಡಿಮೆ ಮಾಡಿದೆ. ಈ ಮೂಲಕ ಸರಳವಾಗಿ ಅರ್ಥವಾಗುವಂತೆ ಮಾಡುತ್ತದೆ.

‘ಆದಾಯ ತೆರಿಗೆ ಕಾಯ್ದೆ 2025 ರಾಷ್ಟ್ರಪತಿಗಳ ಅನುಮೋದನೆಯನ್ನು ಪಡೆದುಕೊಂಡಿದೆ. ಆದಾಯ ತೆರಿಗೆ ಕಾಯ್ದೆ 1961ರ ಬದಲು ಈ ಹೊಸ ಕಾಯ್ದೆ ಜಾರಿಗೆ ಬಂದಿದೆ’ ಎಂದು ಆದಾಯ ತೆರಿಗೆ ಇಲಾಖೆ ‘ಎಕ್ಸ್’ನಲ್ಲಿ ತಿಳಿಸಿದೆ.

ಆದಾಯ ತೆರಿಗೆ (ಐ.ಟಿ) ಮಸೂದೆಯು ಆಗಸ್ಟ್ 12ರಂದು ಸಂಸತ್ತಿನ ಒಪ್ಪಿಗೆ ಪಡೆದಿತ್ತು. ಈ ಹೊಸ ಕಾಯ್ದೆಯು ಯಾವುದೇ ಹೊಸ ತೆರಿಗೆ ಹೇರುವುದಿಲ್ಲ. ಅನಗತ್ಯ ನಿಬಂಧನೆಗಳು ಮತ್ತು ಸಂಕೀರ್ಣ ಭಾಷೆಯನ್ನು ತೆಗೆದು ಹಾಕುತ್ತದೆ.

1961ರ ಕಾಯ್ದೆಯಲ್ಲಿ 819 ಸೆಕ್ಷನ್ಗಳು ಮತ್ತು 47 ಅಧ್ಯಾಯಗಳಿದ್ದವು. ಇದನ್ನು ಹೊಸ ಕಾಯ್ದೆಯಲ್ಲಿ 536 ಸೆಕ್ಷನ್ ಮತ್ತು 23 ಅಧ್ಯಾಯಕ್ಕೆ ಇಳಿಕೆ ಮಾಡಲಾಗಿದೆ. 5.12 ಲಕ್ಷ ಪದಗಳು 2.6 ಲಕ್ಷಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.