ಮುಂಬೈ: ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಶೇ 15ರಷ್ಟು ಏರಿಕೆ ಕಂಡು ಬಂದಿದೆ.

ಬ್ಯಾಂಕ್‌ಗಳಲ್ಲಿ 2018–19ರಲ್ಲಿ ನಡೆದ ವಂಚನೆ ಪ್ರಕರಣಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಹೆಚ್ಚಳಗೊಂಡಿದೆ. ವಂಚನೆ ಪ್ರಕರಣಗಳ ಒಟ್ಟಾರೆ ಮೊತ್ತವು ಕೂಡ ಶೇ 73.8ರಷ್ಟು ಏರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ವಲಯದಲ್ಲಿ 6,801 ಪ್ರಕರಣಗಳು ವರದಿಯಾಗಿವೆ. ವಂಚನೆಯ ಮೊತ್ತವು ₹ 71,543 ಕೋಟಿಗಳಷ್ಟಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತಿ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿಯೇ ವಂಚನೆ ಪ್ರಕರಣಗಳು ಹೆಚ್ಚಾಗಿ ನಡೆದಿವೆ. ನಂತರದ ಸ್ಥಾನದಲ್ಲಿ ಖಾಸಗಿ ಮತ್ತು ವಿದೇಶಿ ಬ್ಯಾಂಕ್‌ಗಳಿವೆ.

ವಂಚನೆ ನಡೆದ ದಿನಕ್ಕೂ ಅದು ಪತ್ತೆಯಾದ ದಿನಕ್ಕೂ ಸರಾಸರಿ 22 ತಿಂಗಳ ಅಂತರ ಇದೆ. ₹ 100 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಪ್ರಕರಣಗಳ ಒಟ್ಟಾರೆ ಮೊತ್ತವು ₹ 52,200 ಕೋಟಿಗಳಷ್ಟಿದೆ. ಈ ಪ್ರಕರಣಗಳು 55 ತಿಂಗಳ ನಂತರ ಪತ್ತೆಯಾಗಿವೆ.

ವರ್ಷ;ಪ್ರಕರಣ ಸಂಖ್ಯೆ;ಮೊತ್ತ (₹ ಕೋಟಿಗಳಲ್ಲಿ)

2017–18;5,916;41,167

2018–19;6,801;71,543

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ

2017–18;2,885;38,261

2018–19;3,766;64,509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.