ಕ್ವಿಂಟಲ್‌ಗೆ ₹6 ಸಾವಿರಕ್ಕೆ ಇಳಿಕೆ
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ರಾಮಗೇರಿ, ಬಸಾಪುರ, ಮಾಗಡಿ, ಯಳವತ್ತಿ, ಯತ್ನಳ್ಳಿ, ಮಾಡಳ್ಳಿ ಭಾಗದಲ್ಲಿ ಸುಮಾರು 200 ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದೆ. ಪ್ರತಿ ವರ್ಷ ಇಷ್ಟೇ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ’ ಎಂಬುದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಕಾಂತ ಕೋಟಿಮನಿ ಅವರ ವಿವರಣೆ. ‘ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಬೆಳ್ಳುಳ್ಳಿ ದರ ಕ್ವಿಂಟಲ್‌ಗೆ ₹30 ಸಾವಿರದಿಂದ ₹40 ಸಾವಿರ ಇತ್ತು. ಸದ್ಯ ₹5 ಸಾವಿರದಿಂದ ₹6 ಸಾವಿರ ಇದೆ. ಇನ್ನು ಎರಡು ವಾರ ಕಳೆದರೆ ಮತ್ತೆ ದರ ಏರಿಕೆಯಾಗಬಹುದು’ ಎನ್ನುತ್ತಾರೆ ವ್ಯಾಪಾರಿ ಮಾಳಗಿಮನಿ.