ವಿಕಸಿತ ಭಾರತಕ್ಕೆ ಕೇಂದ್ರದ ಒತ್ತು
ಕಳೆದ ಒಂದು ದಶಕದ ಅವಧಿಯಲ್ಲಿ ಭಾರತವು ವಿಶ್ವದ ಐದು ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ನೀತಿ ಆಯೋಗ ಪ್ರಕಟಿಸಿರುವ ‘2047ರ ವಿಕಸಿತ ಭಾರತಕ್ಕಾಗಿ ವಿಕಸಿತ ರಾಜ್ಯ’ ಶೀರ್ಷಿಕೆಯ ವರದಿ ಹೇಳಿದೆ.
2024–25ರಲ್ಲಿ ವಿಶ್ವಬ್ಯಾಂಕ್ ಪ್ರಕಟಿಸಿರುವ ವರದಿ ಪ್ರಕಾರ 14,005 ಡಾಲರ್ (₹11,92,822) ತಲಾ ಆದಾಯ ಹೊಂದಿರುವ ದೇಶಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ಪರಿಗಣಿಸಲಾಗುತ್ತದೆ. 2047ರ ವೇಳೆಗೆ ಭಾರತವು ಈ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಗುರಿ ಹೊಂದಿದೆ. ಈ ವೇಳೆಗೆ ದೇಶದ ಜಿಡಿಪಿ ಗಾತ್ರವು 30 ಟ್ರಿಲಿಯನ್ ಡಾಲರ್‌ಗೆ (₹2,550 ಲಕ್ಷ ಕೋಟಿ) ತಲುಪಲಿದೆ ಎಂದು ವಿವರಿಸಿದೆ.