ನವದೆಹಲಿ: ಭಾರತವು ಮೊದಲ ಬಾರಿಗೆ ಹಡಗಿನ ಮೂಲಕ 14 ಟನ್ ದಾಳಿಂಬೆ ಹಣ್ಣನ್ನು ಅಮೆರಿಕಕ್ಕೆ ರಫ್ತು ಮಾಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯವು ಶನಿವಾರ ತಿಳಿಸಿದೆ.

ಸರಕು ಸಾಗಣೆ ವಿಮಾನಗಳ ಮೂಲಕ ದಾಳಿಂಬೆ ರಫ್ತು ಮಾಡಲಾಗುತ್ತಿತ್ತು. ಇದಕ್ಕೆ ಅಧಿಕ ವೆಚ್ಚ ಭರಿಸಬೇಕಿತ್ತು. ವೆಚ್ಚ ತಗ್ಗಿಸುವ ಜೊತೆಗೆ ಸಮುದ್ರ ಸಾರಿಗೆ ವಿಧಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ದಾಳಿಂಬೆ ತುಂಬಿದ್ದ ಒಟ್ಟು 4,620 ಬಾಕ್ಸ್ಗಳು, ಕಳೆದ ತಿಂಗಳು ಅಮೆರಿಕದ ಪೂರ್ವ ಕರಾವಳಿಗೆ ತಲುಪಿವೆ ಎಂದು ತಿಳಿಸಿದೆ.

ಹಡಗಿನ ಮೂಲಕ ದಾಳಿಂಬೆ ರಫ್ತು ಯಶಸ್ವಿಯಾಗಿರುವ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಮಾವಿನ ಹಣ್ಣನ್ನು ಇದೇ ವಿಧಾನ ಅನುಸರಿಸಿ ರಫ್ತು ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.