ನವದೆಹಲಿ (ಪಿಟಿಐ): ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್ನಿಂದ ನವೆಂಬರ್ವರೆಗೆ ಚೀನಾಕ್ಕೆ, ದೇಶದಿಂದ ₹1.10 ಲಕ್ಷ ಕೋಟಿ ಮೌಲ್ಯದಷ್ಟು ಸರಕುಗಳು ರಫ್ತಾಗಿವೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

2024–25ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ದೇಶದಿಂದ ಚೀನಾಕ್ಕೆ ₹82,965 ಕೋಟಿ ಮೌಲ್ಯದ ಸರಕುಗಳು ರಫ್ತಾಗಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ರಫ್ತು ಪ್ರಮಾಣವು ಶೇ 33ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಚೀನಾವು ಕ್ರಮೇಣವಾಗಿ, ಭಾರತದ ಪ್ರಮುಖ ರಫ್ತು ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಅಲ್ಲದೆ, ಈ ದತ್ತಾಂಶವು ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ರಚನಾತ್ಮಕ ಬದಲಾವಣೆಯನ್ನು ಸೂಚಿಸುತ್ತಿದೆ ಎಂದು ತಿಳಿಸಿದೆ.
.ಭಾರತ, ಚೀನಾ ವಿರುದ್ಧ ಶೇ500ರಷ್ಟು ಸುಂಕ ಹೇರಲು ಅವಕಾಶ: ಮಸೂದೆಗೆ ಟ್ರಂಪ್ ಒಪ್ಪಿಗೆ.ಭಾರತ–ಚೀನಾ ಗಡಿ ಗ್ರಾಮದಲ್ಲಿ ಸೇನೆಯಿಂದ ಸೌರ ವಿದ್ಯುತ್ ಸ್ಥಾವರ.
ಎಲೆಕ್ಟ್ರಾನಿಕ್ಸ್ ವಸ್ತುಗಳು, ಕೃಷಿ ಮತ್ತು ಸಾಗರೋತ್ಪನ್ನಗಳು, ದೂರಸಂಪರ್ಕ ಉಪಕರಣಗಳು ಹಾಗೂ ಮಸಾಲೆಗಳಂತಹ ಉತ್ಪನ್ನಗಳು ರಫ್ತು ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಿಳಿಸಿದೆ.

ಅಮೆರಿಕದಲ್ಲಿ ಭಾರತದ ಸರಕುಗಳಿಗೆ ಹೆಚ್ಚಿನ ಸುಂಕ ಹೇರಲಾಗುತ್ತಿದೆ. ಇದರಿಂದ ಅಲ್ಲಿಗೆ ರಫ್ತು ಮಾಡಲು ಕಷ್ಟಕರವಾಗುತ್ತಿದೆ. ಈ ವೇಳೆ ಭಾರತವು ವಿವಿಧ ಮಾರುಕಟ್ಟೆಗಳಲ್ಲಿ ವ್ಯಾಪಾರದ ಅವಕಾಶಕ್ಕಾಗಿ ಅನ್ವೇಷಣೆ ಮಾಡುತ್ತಿದೆ ಎಂದು ರಫ್ತುದಾರರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.