ನವದೆಹಲಿ: ಕೋವಿಡ್–19ರ ಎರಡನೇ ಅಲೆ ನಿಯಂತ್ರಿಸಲು ಸ್ಥಳೀಯವಾಗಿ ನಿರ್ಬಂಧಗಳು ಜಾರಿಯಾದ ಕಾರಣ ಏಪ್ರಿಲ್‌ನಲ್ಲಿ ಇಂಧನ ಮಾರಾಟ ಇಳಿಕೆ ಕಂಡಿದೆ.

2019ರ ಏಪ್ರಿಲ್‌ನಲ್ಲಿ ಇದ್ದ ಒಟ್ಟಾರೆ ಇಂಧನ ಬೇಡಿಕೆಗೆ ಹೋಲಿಸಿದರೆ 2021ರ ಏಪ್ರಿಲ್ ಅಂತ್ಯಕ್ಕೆ ಶೇಕಡ 7ರಷ್ಟು ಇಳಿಕೆ ಆಗಿದೆ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ (ಬಿಪಿಸಿಎಲ್) ಮಾರುಕಟ್ಟೆ ವಿಭಾಗದ ನಿರ್ದೇಶಕ ಅರುಣ್ ಸಿಂಗ್ ತಿಳಿಸಿದ್ದಾರೆ.

2020ರ ಏಪ್ರಿಲ್‌ನಲ್ಲಿ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಆ ತಿಂಗಳಿನಲ್ಲಿ ಇಂಧನ ಮಾರಾಟವು ಅರ್ಧಕ್ಕಿಂತ ಹೆಚ್ಚು ಇಳಿಕೆ ಕಂಡಿತ್ತು. ಹೀಗಾಗಿ 2021ರ ಏಪ್ರಿಲ್ ತಿಂಗಳ ಮಾರಾಟದ ಅಂಕಿ–ಅಂಶವನ್ನು 2020ರ ಏಪ್ರಿಲ್ ತಿಂಗಳ ಮಾರಾಟದೊಂದಿಗೆ ಹೋಲಿಸುವುದು ಅಷ್ಟು ಸಮಂಜಸ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕೋವಿಡ್‌ನ ಎರಡನೇ ಅಲೆಯು ಜೂನ್ ವೇಳೆಗೆ ಕಡಿಮೆ ಆಗುವ ನಿರೀಕ್ಷೆ ಇದ್ದು, ಆ ವೇಳೆಗೆ ಸ್ಥಳೀಯ ಇಂಧನ ಬೇಡಿಕೆಯು ಏರಿಕೆ ಕಾಣಲು ಆರಂಭಿಸಲಿದೆ ಎಂದೂ ಅವರು ಹೇಳಿದ್ದಾರೆ.

ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟ ಕಂಪನಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಪೆಟ್ರೋಲ್ ಮಾರಾಟ 21.4 ಲಕ್ಷ ಟನ್‌ಗಳಿಗೆ ಇಳಿಕೆ ಆಗಿದೆ. ಆಗಸ್ಟ್ ಬಳಿಕ ಆಗಿರುವ ಕನಿಷ್ಠ ಪ್ರಮಾಣದ ಮಾರಾಟ ಇದಾಗಿದೆ.

ವಿಮಾನ ಇಂಧನ (ಎಟಿಎಫ್) ಮಾರಾಟವು ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ 11.5ರಷ್ಟು ಇಳಿಕೆ ಅಗಿದೆ. ಅದೇ ರೀತಿ ಎಲ್‌ಪಿಜಿ ಮಾರಾಟವು ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ 3.3ರಷ್ಟು ಕಡಿಮೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.