ನವದೆಹಲಿ (ಪಿಟಿಐ): ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಸುಮಾರು ಶೇ 7ರಷ್ಟು ಹೆಚ್ಚಳ ಕಾಣುವ ನಿರೀಕ್ಷೆ ಇದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೀತಾ ಈ ಮಾತು ಹೇಳಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 6.4ರಷ್ಟು ಆಗಲಿದೆ ಎಂದು ಈ ಮೊದಲು ಅಂದಾಜಿಸಿತ್ತು. ಅಕ್ಟೋಬರ್ನಲ್ಲಿ ಈ ದರವನ್ನು ಪರಿಷ್ಕರಿಸಿ ಶೇ 6.6ಕ್ಕೆ ಹೆಚ್ಚಿಸಿದೆ.

ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಗೀತಾ ಅವರು, ಭಾರತವು ಮುಂದಿನ 20 ವರ್ಷಗಳ ಕಾಲ ವಾರ್ಷಿಕ ಶೇ 8ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದರೆ, ದೇಶವು 2047ರ ಗುರಿಗೆ ಹತ್ತಿರವಾಗುತ್ತದೆ. ಆದರೆ, ನಿರಂತರವಾಗಿ 20 ವರ್ಷ ಜಿಡಿಪಿಯ ಬೆಳವಣಿಗೆ ದರವನ್ನು ಶೇ 8ರ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಸುಲಭವಲ್ಲ. ಇದಕ್ಕಾಗಿ ನಿರಂತರ ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕದ ವ್ಯಾಪಾರ ಒಪ್ಪಂದ ಬಗ್ಗೆ ಮಾತನಾಡಿದ ಅವರು, ‘ಭಾರತಕ್ಕೆ ಅಮೆರಿಕವು ಪ್ರಮುಖ ಪಾಲುದಾರ ರಾಷ್ಟ್ರ. ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಎರಡೂ ಕಡೆಗಳಿಗೆ ಒಪ್ಪುವಂತಹ ಬಗೆಯಲ್ಲಿ ರೂಪುಗೊಳ್ಳಬೇಕು’ ಎಂದು ಹೇಳಿದ್ದಾರೆ.

ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ಗೆ 60 ಡಾಲರ್ನ ಆಸುಪಾಸಿನಲ್ಲಿದೆ. ಭಾರತವು ರಷ್ಯಾ ಅಲ್ಲದೆ, ಇಂಧನ ಪಾಲುದಾರ ರಾಷ್ಟ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ಅಮೆರಿಕದ ಜೊತೆ ವ್ಯಾಪಾರ ಸಂಬಂಧವನ್ನು ಮತ್ತೆ ಹೆಚ್ಚಿಸಲು ಇದು ಅವಕಾಶವಾಗಿದೆ ಎಂದು ಹೇಳಿದ್ದಾರೆ.