ಗುರುವಾರ , ಏಪ್ರಿಲ್ 15, 2021
24 °C

ದೇಶಿ ಕಂಪನಿಗಳ ವಿದೇಶಿ ಹೂಡಿಕೆ ಶೇ 31ರಷ್ಟು ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಕಂಪನಿಗಳ ವಿದೇಶಿ ನೇರ ಹೂಡಿಕೆಯು (ಒಎಫ್‌ಡಿಐ) ಫೆಬ್ರುವರಿಯಲ್ಲಿ ಶೇಕಡ 31ರಷ್ಟು ಇಳಿಕೆ ಆಗಿದ್ದು, ₹ 13,505 ಕೋಟಿಗಳಷ್ಟಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ದೇಶಿ ಕಂಪನಿಗಳು ವಿದೇಶದಲ್ಲಿರುವ ತಮ್ಮ ಅಂಗಸಂಸ್ಥೆಗಳಲ್ಲಿ 2020ರ ಫೆಬ್ರುವರಿಯಲ್ಲಿ ₹ 19,418 ಕೋಟಿ ಹೂಡಿಕೆ ಮಾಡಿದ್ದವು. 2021ರ ಜನವರಿಯಲ್ಲಿ ₹ 8,687 ಕೋಟಿ ಹೂಡಿಕೆ ಆಗಿತ್ತು. ಇದಕ್ಕೆ ಹೋಲಿಸಿದರೆ 2021ರ ಫೆಬ್ರುವರಿಯಲ್ಲಿನ ಹೂಡಿಕೆಯು ಗರಿಷ್ಠ ಮಟ್ಟದಲ್ಲಿದೆ.

ಟಾಟಾ ಸ್ಟೀಲ್‌, ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್, ಒಎನ್‌ಜಿಸಿ ವಿದೇಶ್ ಲಿಮಿಟೆಡ್‌, ಜೆಎಸ್‌ಡಬ್ಲ್ಯು ಸ್ಟೀಲ್ ಸೇರಿದಂತೆ ಹಲವು ಕಂಪನಿಗಳು ವಿದೇಶಗಳಲ್ಲಿರುವ ತಮ್ಮ ಅಂಗಸಂಸ್ಥೆಗಳಲ್ಲಿ ಹೂಡಿಕೆ ಮಾಡಿವೆ. ಬ್ಯಾಂಕ್‌ಗಳ ಆನ್‌ಲೈನ್‌ ವರದಿ ಆಧರಿಸಿ ಈ ಮಾಹಿತಿ ನೀಡಲಾಗಿದ್ದು, ಇವು ತಾತ್ಕಾಲಿಕವಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು