ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾ ಆದಾಯ ಹೆಚ್ಚಿದರಷ್ಟೇ ಅಭಿವೃದ್ಧಿ ಸಾಧ್ಯ: ಸಿ. ರಂಗರಾಜನ್‌

Published 13 ಫೆಬ್ರುವರಿ 2024, 15:16 IST
Last Updated 13 ಫೆಬ್ರುವರಿ 2024, 15:16 IST
ಅಕ್ಷರ ಗಾತ್ರ

ಹೈದರಾಬಾದ್‌ : ‘ಭಾರತದ ಆರ್ಥಿಕತೆ ಬೆಳವಣಿಗೆಯು ವಾರ್ಷಿಕವಾಗಿ ಶೇ 7ರಿಂದ 8ರಷ್ಟು ಪ್ರಗತಿ ಸಾಧಿಸಿದರಷ್ಟೇ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಾಧ್ಯ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್‌ ಸಿ. ರಂಗರಾಜನ್‌ ಹೇಳಿದ್ದಾರೆ.

‘ದೇಶದಲ್ಲಿನ ಅಸಮಾನತೆ ಅಥವಾ ಬಡತನದ ನಿರ್ಮೂಲನೆಗೆ ಹೊಸ ಆವಿಷ್ಕಾರವೊಂದೇ ಪರಿಹಾರವಲ್ಲ. ಆರ್ಥಿಕತೆಯ ಕ್ಷಿ‍ಪ್ರಗತಿ ಬೆಳವಣಿಗೆಗಾಗಿ ಸಾಮಾಜಿಕ ಭದ್ರತೆಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ತಲಾ ಆದಾಯವು ₹10.78 ಲಕ್ಷ  (13 ಸಾವಿರ ಅಮೆರಿಕನ್‌ ಡಾಲರ್‌) ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅಭಿವೃದ್ಧಿ ಹೊಂದಿದ ಆರ್ಥಿಕತೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಭಾರತದಲ್ಲಿ ತಲಾ ಆದಾಯವು ₹2.24 ಲಕ್ಷ (2,700 ಅಮೆರಿಕನ್‌ ಡಾಲರ್) ಇದೆ. ಇದು ಐದು ಪಟ್ಟು ಹೆಚ್ಚಾದರಷ್ಟೇ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಲು ಸಾಧ್ಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT