ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವ್ಯಾಪಾರ ಕುರಿತು ಭಾರತ, ರಷ್ಯಾ ಮಾತುಕತೆ

Last Updated 17 ಏಪ್ರಿಲ್ 2023, 15:31 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ರಷ್ಯಾ ನಡುವೆ ಮುಕ್ತ ವ್ಯಾಪಾರ ವಹಿವಾಟು ಕುರಿತು ಮಾತುಕತೆ ನಡೆಯುತ್ತಿದೆ ಎಂದು ಎರಡೂ ದೇಶಗಳು ಹೇಳಿವೆ. ರಷ್ಯಾ–ಉಕ್ರೇನ್ ಸಮರ ಆರಂಭವಾದ ನಂತರದಲ್ಲಿ ಭಾರತ–ರಷ್ಯಾ ನಡುವೆ ಹುಲುಸಾಗಿ ಬೆಳೆದಿರುವ ವಾಣಿಜ್ಯ ಸಂಬಂಧಗಳನ್ನು ಈ ಮಾತುಕತೆಯು ಇನ್ನಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಇದೆ.

ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ವಾಣಿಜ್ಯ ಒಪ್ಪಂದದ ವಿಚಾರವಾಗಿ ಭಾರತವು ‘ಮುಂದಕ್ಕೆ ಸಾಗಿದೆ’ ಎಂದು ಹೇಳಿದ್ದಾರೆ. ಮುಕ್ತ ವ್ಯಾಪಾರ ವಹಿವಾಟು ಒಪ್ಪಂದವು ಎರಡೂ ದೇಶಗಳ ಪಾಲಿಗೆ ಹೂಡಿಕೆಯನ್ನು ಖಾತರಿಪಡಿಸಲಿದೆ ಎಂದು ರಷ್ಯಾದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಡೆನಿಸ್ ಮಂಟುರೊವ್ ಹೇಳಿದ್ದಾರೆ.

ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಭಾರತವು ಸ್ಪಷ್ಟವಾಗಿ ಟೀಕಿಸಿಲ್ಲ. ಆದರೆ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕರೆಕೊಟ್ಟಿದೆ.

ಭಾರತಕ್ಕೆ ಹಿಂದಿನಿಂದಲೂ ರಕ್ಷಣಾ ಉಪಕರಣಗಳನ್ನು ಪೂರೈಸುತ್ತಿರುವ ರಷ್ಯಾ, ಈಗ ಭಾರತಕ್ಕೆ ಅತಿಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಕೂಡ ಪೂರೈಕೆ ಮಾಡುತ್ತಿದೆ.

ಕಾರು, ವಿಮಾನ ಮತ್ತು ರೈಲು ಸೇರಿದಂತೆ ಪ್ರಮುಖ ವಲಯಗಳ ಐನೂರಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ರಷ್ಯಾ ಉತ್ಸುಕವಾಗಿದೆ ಎಂದು ರಾಯಿಟರ್ಸ್‌ ಕಳೆದ ವರ್ಷದ ನವೆಂಬರ್‌ನಲ್ಲಿ ವರದಿ ಮಾಡಿತ್ತು. ಭಾರತವು ರಷ್ಯಾ ಜೊತೆಗಿನ ವ್ಯಾಪಾರ ವಹಿವಾಟಿನಲ್ಲಿ ವ್ಯಾಪಾರ ಕೊರತೆ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT