ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2025ರಲ್ಲಿ ಭಾರತದ ಜಿಡಿಪಿ ಶೇ 6.8– 2031ರ ಹೊತ್ತಿಗೆ ಉನ್ನತ ಮಧ್ಯಮ ಆದಾಯದ ದೇಶ

Published 6 ಮಾರ್ಚ್ 2024, 10:08 IST
Last Updated 6 ಮಾರ್ಚ್ 2024, 10:08 IST
ಅಕ್ಷರ ಗಾತ್ರ

ನವದೆಹಲಿ: ‘ಮುಂದಿನ ಆರ್ಥಿಕ ವರ್ಷದ ಹೊತ್ತಿಗೆ ಭಾರತದ ಜಿಡಿಪಿ ಶೇ 6.8ರಷ್ಟು ಇರಲಿದ್ದು, 2031ರ ಹೊತ್ತಿಗೆ ದೇಶದ ಆರ್ಥಿಕತೆ 7 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಲಿದೆ. ಜತೆಗೆ ದೇಶವು ಉನ್ನತ ಮಧ್ಯಮ ಆದಾಯದ ದೇಶವಾಗಲಿದೆ’ ಎಂದು ಕ್ರಿಸಿಲ್ ರೇಟಿಂಗ್ಸ್‌ ಬುಧವಾರ ಹೇಳಿದೆ.

‘ಭಾರತದ ಆರ್ಥಿಕತೆಯು ದೇಶೀಯವಾಗಿ ಕೈಗೊಂಡ ಕೆಲವೊಂದು ರಚನಾತ್ಮಕ ಸುಧಾರಣೆಗಳು ಹಾಗೂ ಆವರ್ತಕ ಸನ್ನೆಕೋಲು ದೇಶದ ಆರ್ಥಿಕತೆಯನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಲಿದೆ. ಇಷ್ಟು ಮಾತ್ರವಲ್ಲ 2031ರ ಹೊತ್ತಿಗೆ ಜಗತ್ತಿನ ಉತ್ತಮ ಆರ್ಥಿಕತೆಯ ದೇಶಗಳಲ್ಲಿ ಅಗ್ರ 3ನೇ ಸ್ಥಾನದಲ್ಲಿ ನಿಲ್ಲಿಸಲಿದೆ’ ಎಂದು ಇಂಡಿಯಾ ಔಟ್‌ಲುಕ್‌ ವರದಿಯಲ್ಲಿ ಕ್ರಿಸಿಲ್ ಹೇಳಿದೆ.

‘2023ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಶೇ 7.6ರಷ್ಟು ಬೆಳವಣಿಗೆಯನ್ನು ದೇಶ ಹೊಂದಿತ್ತು. 2025ರ ಹೊತ್ತಿಗೆ ಇದು ಶೇ 6.8ರ ಸ್ಥಿರತೆ ಕಾಯ್ದುಕೊಳ್ಳಲಿದೆ. 2025ರಿಂದ 2031ರ ಅವಧಿಯಲ್ಲಿ ಭಾರತವು 5 ಟ್ರಿಲಿಯನ್ ಅಮೆರಿಕನ್ ಡಾಲರ್‌ನ ಗಡಿ ಮೀರಲಿದ್ದು, ಸುಮಾರು 7 ಟ್ರಿಲಿಯನ್ ಅಮೆರಿಕನ್ ಡಾಲರ್‌ ಸಮೀಪ ತಲುಪಲಿದೆ’ ಎಂದು ಅಂದಾಜಿಸಲಾಗಿದೆ.

‘ಅಮೆರಿಕ, ಚೀನಾ, ಜಪಾನ್ ಹಾಗೂ ಜರ್ಮನಿ ನಂತರದಲ್ಲಿ ಭಾರತವು 3.6 ಟ್ರಿಲಿಯನ್ ಅಮೆರಿಕನ್ ಡಾಲರ್‌ ಆರ್ಥಿಕತೆಯೊಂದಿಗೆ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದೆ. 2031ರ ಹೊತ್ತಿಗೆ ಇದು 6.7 ಟ್ರಿಲಿಯನ್ ಅಮೆರಿಕನ್ ಡಾಲರ್‌ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಈ ಹೊತ್ತಿಗೆ ಭಾರತವು ಉನ್ನತ ಮಧ್ಯಮ ಆದಾಯದ ದೇಶಗಳ ಸಾಲಿಗೆ ಸೇರಲಿದೆ’ ಎಂದಿದೆ.

ವಿಶ್ವ ಬ್ಯಾಂಕ್‌ನ ಆಧಾರದಲ್ಲಿ, ಕೆಳ ಮಧ್ಯಮ ಆದಾಯದ ದೇಶಗಳಲ್ಲಿ ತಲಾ ಆದಾಯ 1 ಸಾವಿರದಿಂದ–4 ಸಾವಿರ ಅಮೆರಿಕನ್ ಡಾಲರ್‌ವರೆಗೆ ಇರುತ್ತದೆ. ಆದರೆ ಉನ್ನತ ಮಧ್ಯಮ ಆದಾಯವು 4 ಸಾವಿರದಿಂದ 12 ಸಾವಿರ ಅಮೆರಿಕನ್ ಡಾಲರ್‌ ಹಂತದಲ್ಲಿರಲಿದೆ. 

ಭಾರತದ ಆರ್ಥಿಕ ಪರಿಸ್ಥಿತಿ ಕುರಿತ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕ್ರಿಸಿಲ್ ಮ್ಯಾನೇಜಿಂಗ್ ನಿರ್ದೇಶಕ ಹಾಗೂ ಸಿಇಒ ಅಮಿಶ್ ಮೆಹ್ತಾ, ‘ಪ್ರಮುಖ ತಯಾರಿಕಾ ಕ್ಷೇತ್ರಗಳ ಗಮನಾರ್ಹ ಬೆಳವಣಿಗೆಯು ಈ ಆರ್ಥಿಕತೆಯ ಗುರಿ ತಲುಪಲು ಕಾರಣವಾಗಲಿದೆ. ಜಾಗತಿಕ ಪೂರಕ ಸರಪಳಿಯಲ್ಲಿನ ವೈವಿಧ್ಯಮಯ ಅವಕಾಶಗಳು, ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಲಿರುವ ಹೂಡಿಕೆ ಮತ್ತು ಸದೃಢವಾದ ಹಣಕಾಸು ಪರಿಸ್ಥಿತಿಯಿಂದ ಇದು ಸಾಧ್ಯವಾಗಲಿದೆ. ಎಲೆಕ್ಟ್ರಾನಿಕ್ಸ್‌, ಇವಿ, ಇಂಧನ ಕ್ಷೇತ್ರಗಳನ್ನು ಒಳಗೊಂಡು ತಯಾರಿಕೆ ಮತ್ತು ಸೇವಾ ವಲಯ ಶೇ 9.1ರಷ್ಟು ಬೆಳವಣಿಗೆ ಕಾಣಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT