ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ: ಶೇಕಡ (–)7.3ರಷ್ಟು ಕುಸಿತ

Last Updated 31 ಮೇ 2021, 15:49 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯು 2020–21ರಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಒಟ್ಟು ಶೇಕಡ (–)7.3ರಷ್ಟು ಕುಸಿದಿದೆ. ಕುಸಿತದ ಪ್ರಮಾಣವು ಶೇ (–) 8ರಷ್ಟು ಇರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಈ ಹಿಂದೆ ಅಂದಾಜಿಸಿತ್ತು.

ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಶೇ 1.6ರಷ್ಟು ಏರಿಕೆ ದಾಖಲಿಸಿದೆ. ಡಿಸೆಂಬರ್‌ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 0.5ರಷ್ಟಿತ್ತು. ಅದಕ್ಕೂ ಹಿಂದಿನ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿಯು ಶೂನ್ಯಕ್ಕಿಂತ ಕೆಳಮಟ್ಟದಲ್ಲಿ ಇತ್ತು.

1979–80ರ ನಂತರ ಇಡೀ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೂನ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಬಂದಿರುವುದು ಇದೇ ಮೊದಲು. 1979–80ರಲ್ಲಿ ದೇಶದ ಜಿಡಿಪಿಯು ಶೇ (–) 5.2ರಷ್ಟು ಕುಸಿದಿತ್ತು.

ಎನ್‌ಎಸ್‌ಒ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಜಿಡಿಪಿ ಮೊತ್ತವು 2020–21ರಲ್ಲಿ ₹ 135 ಲಕ್ಷ ಕೋಟಿಗೆ ಕುಸಿದಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಇದರ ಮೊತ್ತವು ₹ 145 ಲಕ್ಷ ಕೋಟಿ ಆಗಿತ್ತು. ದೇಶದ ಜಿಡಿಪಿಯ ಮೊತ್ತವು ಮತ್ತೆ ₹ 145 ಲಕ್ಷ ಕೋಟಿಗೆ ತಲುಪಬೇಕು ಎಂದಾದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳವಣಿಗೆಯು ಶೇ 10ರಿಂದ ಶೇ 11ರಷ್ಟು ಇರಬೇಕು.

ಆದರೆ, ಕೋವಿಡ್‌ ಎರಡನೆಯು ಅಲೆಯು ಆರ್ಥಿಕ ಚಟುವಟಿಕೆಗಳ ವೇಗಕ್ಕೆ ಅಡ್ಡಿ ಉಂಟುಮಾಡಿದೆ. ಹಾಗಾಗಿ, ಜಿಡಿಪಿ ಬೆಳವಣಿಗೆಯುಎರಡಂಕಿಯ ಪ್ರಮಾಣದಲ್ಲಿ ಇರುವುದಿಲ್ಲ ಎಂದು ಹಲವು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದ್ದರೂ, ಗ್ರಾಹಕರಿಂದ ಬೇಡಿಕೆ ಕುಸಿದಿರುವುದು ಹಾಗೂ ನಿರುದ್ಯೋಗ ಶೇ 14.73ಕ್ಕೆ ತಲುಪಿರುವುದು ಹೊಸ ಸವಾಲು ತಂದಿತ್ತಿವೆ.

ಜಿಡಿಪಿ ಕುಸಿತವು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಈ ಹಿಂದೆ ಅಂದಾಜಿಸಿದ್ದಕ್ಕಿಂತಲೂ ತುಸು ಕಡಿಮೆ ಪ್ರಮಾಣದಲ್ಲಿ ಇದೆ. ಕುಸಿತವು ಶೇ (–)7.5ರಷ್ಟು ಆಗಬಹುದು ಎಂದು ಆರ್‌ಬಿಐ ಅಂದಾಜು ಮಾಡಿತ್ತು.

ಜಿಡಿಪಿ ಏರಿಕೆ, ಇಳಿಕೆ

ವರ್ಷ

ಬದಲಾವಣೆ (%)

2016 17;8.3
2017 18;7
2018 19;6.1
2019 20;4
2020–21 (–)7.3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT