ಭಾನುವಾರ, ಜೂಲೈ 5, 2020
28 °C

ಲಾಕ್‍ಡೌನ್: ಹಬ್ಬ, ಮದುವೆ ಸಮಾರಂಭಗಳಿಲ್ಲದ ಕಾರಣ ಕುಸಿಯಲಿದೆ ಚಿನ್ನದ ಬೇಡಿಕೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

gold

ಮುಂಬೈ: ಲಾಕ್‍ಡೌನ್‌ನಿಂದಾಗಿ ಚಿನ್ನದಂಗಡಿಗಳು ಮುಚ್ಚಿರುವುದರಿಂದಲೂ, ಹಬ್ಬ, ಮದುವೆ ಸಮಾರಂಭಗಳು ರದ್ದಾಗಿರುವ ಕಾರಣ ಚಿನ್ನದ ಬೇಡಿಕೆ ಕುಸಿಯಲಿದೆ. 2020ರಲ್ಲಿ ಭಾರತದಲ್ಲಿ ಚಿನ್ನ ಖರೀದಿ ಶೇ. 50ರಷ್ಟು ಇಳಿದಿದ್ದು ಚಿನ್ನದ ಬೆಲೆ ಮೂರು ದಶಕಗಳ ಹಿಂದಿನ ಬೆಲೆಗೆ ಬಂದು ತಲುಪುವ ಸಾಧ್ಯತೆ ಇದೆ.

ಜಗತ್ತಿನಲ್ಲಿ ಅತೀ ಹೆಚ್ಚು ಚಿನ್ನ ಖರೀದಿ ಮಾಡುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಚಿನ್ನ ಖರೀದಿ ಇಳಿಕೆ ಆಗಿರುವ ಕಾರಣ ಇದು ವಹಿವಾಟು ಮೇಲೆ ಪರಿಣಾಮ ಬೀರಲಿದೆ.

ಈ ರೀತಿ ಬೇಡಿಕೆ ಕುಸಿದಿರುವುದನ್ನು ನಾವು ಇಲ್ಲಿಯವರೆಗೆ ಕಂಡಿಲ್ಲ. ಲಾಕ್‍ಡೌನ್ ವೇಳೆ ಮಾರಾಟ ಶೂನ್ಯವಾಗಿದೆ ಎಂದು ಆಲ್ ಇಂಡಿಯಾ ಜೆಮ್ ಆ್ಯಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್  ಕೌನ್ಸಿಲ್ ಅಧ್ಯಕ್ಷ ಎನ್. ಅನಂತ ಪದ್ಮನಾಭನ್ ಹೇಳಿದ್ದಾರೆ. 2020ರಲ್ಲಿ  ಭಾರತದ ಚಿನ್ನ ಖರೀದಿ 400ಟನ್‌ನಿಂದ ಕುಸಿದು 350 ಟನ್ ಆಗಲಿದೆ.1991ರಲ್ಲಿ  ಇದೇ ರೀತಿಯಾಗಿತ್ತು ಎಂದು ಅವರು  ಹೇಳಿದ್ದಾರೆ.

ಲಾಕ್‍ಡೌನ್ ಮೇ.3ರವರೆಗೆ ವಿಸ್ತರಿಸಿರುವುದರಿಂದ ಬೇಸಿಗೆಕಾಲದಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭಗಳನ್ನು ಮುಂದೂಡಲಾಗಿದೆ. ಈ ರೀತಿ ಮದುವೆ ಕಾರ್ಯಕ್ರಮ ಮುಂದೂಡಿರುವುದರಿಂದ ಜ್ಯುವೆಲ್ಲರಿ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ವರ್ಷ ಕೊನೆಯಲ್ಲಿ ಇದೆಲ್ಲ ಸರಿಹೋಗುವ ನಿರೀಕ್ಷೆ ಇದೆ ಎಂದಿದ್ದಾರೆ ಪದ್ಮನಾಭನ್.

ಧಾರ್ಮಿಕ ಆಚರಣೆಗಳಾದ ಗುಡೀ ಪದ್ವಾ, ಅಕ್ಷಯ ತೃತೀಯದಂದು  ಚಿನ್ನ ಖರೀದಿ ಜಾಸ್ತಿಯಾಗುತ್ತಿತ್ತು. ಈಗ ಜನರು ಮನೆಯೊಳಗೆ ಇರುವುದರಿಂದ ಚಿನ್ನ ಖರೀದಿ ಇಲ್ಲದಾಗಿದೆ ಎಂದು  ಮುಂಬೈ ಮೂಲದ ರಿದ್ದಿಸಿದ್ದಿ ಬುಲಿಯನ್ಸ್‌ನ ವ್ಯವಸ್ಥಾಪಕ ನಿರ್ದೇಶಕ  ಪೃಥ್ವಿರಾಜ್ ಕೊಥಾರಿ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಜ್ಯುವೆಲ್ಲರಿ ಉದ್ಯಮವು ಚಿಂತೆಗೀಡಾಗಿದೆ. ಲಾಕ್‍ಡೌನ್ ಮುಗಿದ ಕೂಡಲೇ ವೇತನಕ್ಕೆ ಕತ್ತರಿ ಮತ್ತು  ಕೆಲಸ ನಷ್ಟವಾಗುವ ಸಾಧ್ಯತೆಯೂ ಇಲ್ಲಿದೆ.ಕೊರೊನಾವೈರಸ್ ಲಾಕ್‍ಡೌನ್‌ನಿಂದಾಗಿ ದೇಶದ ಅಭಿವೃದ್ಧಿ ದರ ಮತ್ತಷ್ಟು ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ಹೇಳಿತ್ತು.

ಲಾಕ್‍ಡೌನ್ ಮುಗಿದ ಕೂಡಲೇ ಜನರು ಅಗತ್ಯವಸ್ತುಗಳನ್ನು ಖರೀದಿ ಮಾಡುತ್ತಾರೆ. ಇದಾದನಂತರವೇ ಅವರು ಚಿನ್ನದಂಥ ಬೆಲೆಬಾಳುವ ವಸ್ತುಗಳ ಖರೀದಿ ಬಗ್ಗೆ ಗಮನ ಹರಿಸುವುದು ಎಂದು ಇಂಡಿಯನ್ ಬುಲಿಯನ್ ಆ್ಯಂಡ್ ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು