ಗುರುವಾರ , ಅಕ್ಟೋಬರ್ 1, 2020
20 °C
ಕೋವಿಡ್‌–19ಯಿಂದ ವೈಯಕ್ತಿಕ ಹಣಕಾಸಿನ ಆದ್ಯತೆ ಬದಲು

ಆಪತ್ಕಾಲಕ್ಕೆ ಉಳಿಸಲು ಗಮನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಜನ ಉಳಿತಾಯ ಮಾಡುವಂತೆ ಹಾಗೂ ಉಳಿಸಿದ ಹಣವನ್ನು ಸಂಪತ್ತು ಸೃಷ್ಟಿಸುವ ಕಡೆಗಳಲ್ಲಿ ತೊಡಗಿಸುವಂತೆ ಕೋವಿಡ್‌–19 ಸೃಷ್ಟಿಸಿರುವ ಬಿಕ್ಕಟ್ಟು ಪ್ರೇರೇಪಿಸಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಆರ್ಥಿಕತೆಯು ಚೇತರಿಸಿಕೊಳ್ಳುವ ಬಗ್ಗೆ ಶೇಕಡ 45ರಷ್ಟು ಜನ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕನಿಷ್ಠ ಒಂದು ವರ್ಷದವರೆಗೆ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಹೇಳಿದ್ದಾರೆ. ಸಂಪತ್ತು ನಿರ್ವಹಣೆಯ ಸೇವೆಗಳನ್ನು ಒದಗಿಸುವ ಸ್ಕ್ರಿಪ್‌ಬಾಕ್ಸ್‌ ಕಂಪನಿ ‘ಫೈನಾನ್ಶಿಯಲ್‌ ಫ್ರೀಡಂ ಸರ್ವೆ’ ಹೆಸರಿನಲ್ಲಿ ಈ ಸಮೀಕ್ಷೆ ನಡೆಸಿದೆ.

ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುವುದರಿಂದ ವೈಯಕ್ತಿಕ ಹಣಕಾಸು ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ ಎನ್ನುವ ಅಭಿಪ್ರಾಯವು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು