ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶಿ ಪ್ರವಾಸ ಶೇ 32ರಷ್ಟು ಏರಿಕೆ

Published 3 ಸೆಪ್ಟೆಂಬರ್ 2024, 14:26 IST
Last Updated 3 ಸೆಪ್ಟೆಂಬರ್ 2024, 14:26 IST
ಅಕ್ಷರ ಗಾತ್ರ

ನವದೆಹಲಿ: ಒಂದು ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ವಿದೇಶ ಪ್ರವಾಸ ಮಾಡುವ ಭಾರತೀಯರ ಪ್ರಮಾಣ ಶೇ 32ರಷ್ಟು ಏರಿಕೆಯಾಗಿದೆ ಎಂದು ಮೇಕ್‌ಮೈಟ್ರಿಪ್‌ ವರದಿ ಮಂಗಳವಾರ ತಿಳಿಸಿದೆ.

ವರದಿಯ ಪ್ರಕಾರ, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯು ಅಂತರರಾಷ್ಟ್ರೀಯ ಪ್ರಯಾಣದ ಹುಡುಕಾಟಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವರದಿಯು 2023 ಜೂನ್ ಮತ್ತು 2024ರ ಮೇ ನಡುವಿನ ಅವಧಿಯನ್ನು ಒಳಗೊಂಡಿದೆ.

ಯುಎಇ, ಥಾಯ್ಲೆಂಡ್‌ ಮತ್ತು ಅಮೆರಿಕದಂತಹ ತಾಣಗಳು, ಭಾರತೀಯರು ಪ್ರಯಾಣಿಸಲು ಇಷ್ಟಪಡುವ ಸ್ಥಳಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಕಜಕಸ್ತಾನ, ಅಜರ್‌ಬೈಜಾನ್‌ ಮತ್ತು ಭೂತಾನ್ ಉದಯೋನ್ಮುಖ ಸ್ಥಳಗಳ ಪಟ್ಟಿಯಲ್ಲಿವೆ.

‘ಆದಾಯದಲ್ಲಿನ ಹೆಚ್ಚಳ, ಜಾಗತಿಕ ಸಂಸ್ಕೃತಿಗಳಿಗೆ ಹೆಚ್ಚಿನ ಮಾನ್ಯತೆ ಮತ್ತು ಸುಲಭ ಪ್ರಯಾಣದ ಅವಕಾಶಗಳಿಂದಾಗಿ ಭಾರತೀಯರು ವಿರಾಮ ಮತ್ತು ವ್ಯಾಪಾರಕ್ಕಾಗಿ ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಥಳಗಳನ್ನು ಅನ್ವೇಷಿಸುತ್ತಿದ್ದಾರೆ’ ಎಂದು ಮೇಕ್‌ಮೈಟ್ರಿಪ್‌ನ ಸಹ-ಸಂಸ್ಥಾಪಕ ಮತ್ತು ಸಮೂಹದ ಸಿಇಒ ರಾಜೇಶ್ ಮಾಗೊವ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT