ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಪೊ ದರದಲ್ಲಿ ಅಲ್ಪ ಏರಿಕೆ ಸಾಧ್ಯತೆ: ತಜ್ಞರು ಅಂದಾಜು

Last Updated 15 ನವೆಂಬರ್ 2022, 13:01 IST
ಅಕ್ಷರ ಗಾತ್ರ

ಮುಂಬೈ: ಚಿಲ್ಲರೆ ಹಣದುಬ್ಬರ ಪ್ರಮಾಣವು ತುಸು ಕಡಿಮೆ ಆಗಿರುವ ಕಾರಣ, ಡಿಸೆಂಬರ್‌ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ), ರೆಪೊ ದರವನ್ನು ಶೇಕಡ 0.35ರಷ್ಟು ಮಾತ್ರ ಹೆಚ್ಚಿಸುವ ತೀರ್ಮಾನ ಕೈಗೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಮುಂದಿನ ದಿನಗಳಲ್ಲಿ ಇನ್ನಷ್ಟು ತಗ್ಗುವ ನಿರೀಕ್ಷೆ ಇದೆ. ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ, ಮೇ ತಿಂಗಳ ನಂತರದಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 1.90ರಷ್ಟು ಹೆಚ್ಚಿಸಿದೆ. ರೆಪೊ ದರದ ಕುರಿತು ತೀರ್ಮಾನ ಕೈಗೊಳ್ಳುವ ಹಣಕಾಸು ನೀತಿ ಸಮಿತಿಯು ಡಿಸೆಂಬರ್‌ನಲ್ಲಿ ಸಭೆ ಸೇರಲಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಅಕ್ಟೋಬರ್‌ನಲ್ಲಿ ಶೇ 6.77ಕ್ಕೆ ಇಳಿಕೆಯಾಗಿದೆ. ‘ರೆಪೊ ದರವು ಡಿಸೆಂಬರ್‌ನಲ್ಲಿ ಶೇ 0.35ರಷ್ಟು ಹಾಗೂ ಫೆಬ್ರುವರಿಯಲ್ಲಿ ಶೇ 0.25ರಷ್ಟು ಹೆಚ್ಚಾಗಬಹುದು ಎಂಬುದು ನಮ್ಮ ಅಂದಾಜು’ ಎಂದು ನೊಮುರ ಸಂಸ್ಥೆಯ ಅರ್ಥಶಾಸ್ತ್ರಜ್ಞರಾದ ಸೋನಲ್ ವರ್ಮ ಮತ್ತು ಆರೊದೀಪ್ ನಂದಿ ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಆರ್‌ಬಿಐ ರೆಪೊ ದರ ಹೆಚ್ಚು ಮಾಡದೆ ಇರುವ ಸಾಧ್ಯತೆಯೂ ಇದೆ ಎಂದು ಇಂಡಿಯಾ ರೇಟಿಂಗ್ಸ್ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT