ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಆತಂಕ: ಷೇರುಪೇಟೆಯಲ್ಲಿ ಕರಗಿತು ₹11.43 ಲಕ್ಷ ಕೋಟಿ

ಮುಂದುವರಿದ ಕೊರೊನಾ ಭೀತಿ * ಕಲಬುರ್ಗಿಯ ಮೃತ ವ್ಯಕ್ತಿ ಸೋಂಕಿತ
Last Updated 13 ಮಾರ್ಚ್ 2020, 1:27 IST
ಅಕ್ಷರ ಗಾತ್ರ
ADVERTISEMENT
""

ಮುಂಬೈ: ‘ಕೊರೊನಾ–2’ ವೈರಸ್‌ಅನ್ನು ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವುದು ಮತ್ತು ಯುರೋಪ್‌ ದೇಶಗಳ ಪ್ರವಾಸಿಗರ ಮೇಲೆ ಅಮೆರಿಕ ನಿಷೇಧ ವಿಧಿಸಿರುವುದು ಜಾಗತಿಕ ಷೇರು ಪೇಟೆಗಳ ಗುರುವಾರದ ವಹಿವಾಟಿನಲ್ಲಿ ಅತಿಯಾದ ಮಾರಾಟ ಒತ್ತಡ ಸೃಷ್ಟಿಸಿತು. ಹೂಡಿಕೆದಾರರಲ್ಲಿನ ಗಾಬರಿಯು ಭಾರ ತದ ಷೇರುಪೇಟೆಗಳಲ್ಲಿಯೂ ದಾಖಲೆ ಮಟ್ಟದಲ್ಲಿ ಪ್ರತಿಫಲನಗೊಂಡಿತು.

ಭಾರಿ ಪ್ರಮಾಣದ ಮಾರಾಟ ಒತ್ತಡದ ಕಾರಣಕ್ಕೆ ಕುಸಿತ ತಡೆಯಲು ನ್ಯೂಯಾರ್ಕ್‌ ಷೇರುಪೇಟೆಯಲ್ಲಿ ವಹಿ ವಾಟನ್ನು 15 ನಿಮಿಷ ಸ್ಥಗಿತಗೊಳಿಸಲಾಗಿತ್ತು. ಎಸ್‌ಆ್ಯಂಡ್‌ಪಿ 500 ಸೂಚ್ಯಂಕವು ಶೇ 8ರಷ್ಟು ಕುಸಿತ ಕಂಡಿತು.

ಕೆಲ ದಿನಗಳ ಹಿಂದಿನವರೆಗೆ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತ ‘ಗೂಳಿ ಮಾರುಕಟ್ಟೆ’ಯಾಗಿ ಇನ್ನಿಲ್ಲದ ಭರವಸೆ ಮೂಡಿಸಿದ್ದ ಮುಂಬೈ ಷೇರುಪೇಟೆಯಲ್ಲಿ ಈಗ ಭಾರಿ ಮಾರಾಟ ಒತ್ತಡ ಸೃಷ್ಟಿ ಯಾಗಿದೆ. ನಿಯಂತ್ರಣಕ್ಕೆ ಬಾರದ ‘ಕರಡಿ ಕುಣಿತದ ಮಾರುಕಟ್ಟೆ’ಯಾಗಿ ಪರಿವರ್ತನೆಗೊಂಡಿದೆ.

ಸೋಮವಾರವಷ್ಟೇ ಮಹಾಪತನ ಕಂಡಿದ್ದ ಷೇರುಪೇಟೆಯ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾ ಟಿನಲ್ಲಿ ಅದನ್ನೂ ಮೀರಿ ಸಾರ್ವಕಾಲಿಕ ದಾಖಲೆ ಮಟ್ಟದ ಕುಸಿತಕ್ಕೆ ಒಳಗಾ ಯಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 2,919 ಅಂಶಗಳ ಸಾರ್ವಕಾಲಿಕ ಗರಿಷ್ಠ ಕುಸಿತ ಕಂಡು 32,778 ಅಂಶಗಳಿಗೆ ಇಳಿಯಿತು. ವಹಿವಾಟಿನ ಒಂದು ಹಂತದಲ್ಲಿ 3,204 ಅಂಶಗಳವರೆಗೂ ಕುಸಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 868 ಅಂಶ ಕುಸಿತ ಕಂಡು 9,590 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಆರ್‌ಬಿಐ ಭರವಸೆ: ಮಾರುಕಟ್ಟೆಯಲ್ಲಿನ ಕುಸಿತ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಆರ್‌ಬಿಐ, ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಲು ಮುಂದಾಗಿದೆ.

ಕರಗಿತು ₹ 11.43 ಲಕ್ಷ ಕೋಟಿ

ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ₹ 11.43 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯವು ₹ 137.13 ಲಕ್ಷ ಕೋಟಿಗಳಿಂದ ₹ 125.70 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT