ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಶೇ 6.1ರಷ್ಟು ಪ್ರಗತಿ: ಮೂಡೀಸ್‌ ಇನ್‌ವೆಸ್ಟರ್ಸ್‌ ಸಂಸ್ಥೆ

Published 12 ಏಪ್ರಿಲ್ 2024, 16:22 IST
Last Updated 12 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಆರ್ಥಿಕತೆಯು 2024ರಲ್ಲಿ ಶೇ 6.1ರಷ್ಟು ಪ್ರಗತಿ ಕಾಣಲಿದೆ ಎಂದು ಮೂಡೀಸ್‌ ಇನ್‌ವೆಸ್ಟರ್ಸ್‌ ಸಂಸ್ಥೆ ಅಂದಾಜಿಸಿದೆ. ಇದು 2023ರಲ್ಲಿನ ಶೇ 7.7ರಷ್ಟು ಬೆಳವಣಿಗೆಗಿಂತಲೂ ಕಡಿಮೆ ಆಗಿದೆ.

ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯು ಈ ವರ್ಷ ದೃಢವಾಗಿರಲಿದೆ. ಏಷ್ಯಾ ಪೆಸಿಫಿಕ್‌ ಆರ್ಥಿಕತೆಯು ಶೇ 3.8ರಷ್ಟು ‍ಪ್ರಗತಿ ಕಾಣಲಿದೆ ಎಂದು ಶುಕ್ರವಾರ ತಿಳಿಸಿದೆ.

ಕೊರೊನಾ ಅವಧಿಯಲ್ಲಿ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಉತ್ಪಾದನೆ ಕುಸಿದಿತ್ತು. ಈಗ ಚೇತರಿಕೆ ಕಂಡುಬರುತ್ತಿದೆ. ಚೀನಾ ಮತ್ತು ಭಾರತದಲ್ಲಿ ಹಣದುಬ್ಬರ ನಿಯಂತ್ರಣವು ಅನಿಶ್ಚಿತತೆಯಿಂದ ಕೂಡಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT