ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದಲ್ಲಿ ತಾಳೆ ಎ‌ಣ್ಣೆ ಆಮದು ಶೇ 74ರಷ್ಟು ಹೆಚ್ಚಳ

Published 13 ಜೂನ್ 2024, 14:14 IST
Last Updated 13 ಜೂನ್ 2024, 14:14 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಮೇ ತಿಂಗಳಿನಲ್ಲಿ 7.63 ಲಕ್ಷ ಟನ್‌ನಷ್ಟು ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿದೆ.

2023ರ ಮೇ ತಿಂಗಳಿನಲ್ಲಿ 4.39 ಲಕ್ಷ ಟನ್‌ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 74ರಷ್ಟು ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆಯಿಂದಾಗಿ ಆಮದು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಗುರುವಾರ ತಿಳಿಸಿದೆ.

ಒಟ್ಟು 15.29 ಲಕ್ಷ ಟನ್‌ ಸಸ್ಯಜನ್ಯ ತೈಲ, 5.32 ಲಕ್ಷ ಟನ್‌ ಕಚ್ಚಾ ತಾಳೆ ಎಣ್ಣೆ  ಹಾಗೂ 2.25 ಲಕ್ಷ ಟನ್‌ ಆರ್‌ಬಿಡಿ ಪಾಮೋಲಿನ್‌ ಆಮದಾಗಿದೆ. ಆದರೆ, ಕಚ್ಚಾ ಪಾಮ್‌ ಕೆರ್ನಲ್‌ ತೈಲ ಆಮದು ಇಳಿಕೆಯಾಗಿದೆ ಎಂದು ತಿಳಿಸಿದೆ.

4.10 ಲಕ್ಷ ಟನ್‌ನಷ್ಟು ಸೂರ್ಯಕಾಂತಿ ಎಣ್ಣೆ ಮತ್ತು 3.24 ಲಕ್ಷ ಟನ್‌ನಷ್ಟು ಸೋಯಾಬಿನ್ ಎಣ್ಣೆ ಆಮದಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT