ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಿಂದ ತೈಲ ಆಮದು ಹೆಚ್ಚಲಿದೆ

ಬೆಲೆ ಏರಿಕೆ ಪರಿಣಾಮ: ಸರ್ಕಾರದ ಅಧಿಕಾರಗಳ ಮಾಹಿತಿ
Last Updated 19 ಮಾರ್ಚ್ 2022, 11:36 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಅಮೆರಿಕದಿಂದ ಈ ವರ್ಷ ಆಮದು ಮಾಡಿಕೊಳ್ಳಲಿರುವ ಕಚ್ಚಾ ತೈಲದ ಪ್ರಮಾಣವು ಶೇ 11ರಷ್ಟು ಏರಿಕೆ ಆಗಲಿದೆ ಎಂದು ಸರ್ಕಾರದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ರಷ್ಯಾದ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ಕಠಿಣ ನಿರ್ಬಂಧ ಹೇರಿವೆ. ಹೀಗಾಗಿ ತೈಲ ಆಮದು ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶಗಳು ಕಚ್ಚಾ ತೈಲ ಉತ್ಪಾದನಾ ದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಮುಂದಾಗಿವೆ.

ಭಾರತವು ತನ್ನ ದೇಶಿ ಬೇಡಿಕೆಯ ಬಹುಪಾಲು ಕಚ್ಚಾತೈಲವನ್ನು ಮಧ್ಯಪ್ರಾಚ್ಯದ ದೇಶಗಳಿಂದ ಖರೀದಿಸುತ್ತಿದೆ. ಆದರೆ, ಅಮೆರಿಕವು ಭಾರತಕ್ಕೆ ತೈಲ ಆಮದು ಮಾಡುವ ನಾಲ್ಕನೇ ಅತಿದೊಡ್ಡ ಮೂಲವಾಗಿ ಬೆಳೆದಿದೆ. ಈ ವರ್ಷ ಅಮೆರಿಕದಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದ ತೈಲ ಆಮದಾಗಲಿದೆ ಎಂದು ಹೇಳಿದ್ದಾರೆ.

ಭಾರತದ ಒಟ್ಟಾರೆ ತೈಲ ಬೇಡಿಕೆಯ ಶೇ 23ರಷ್ಟನ್ನು ಇರಾಕ್‌ ಪೂರೈಸುತ್ತಿದೆ. ಸೌದಿ ಅರೇಬಿಯಾ ಶೇ 18ರಷ್ಟು ಮತ್ತು ಯುಎಇ ಶೇ 11ರಷ್ಟು ಪೂರೈಕೆ ಮಾಡುತ್ತಿವೆ. ಈ ವರ್ಷ ಅಮೆರಿಕದ ಪಾಲು ಶೇ 8ಕ್ಕೆ ತಲುಪಲಿದೆ ಎಂದು ಹೆಸರು ಬಹಿರಂಗಪಡಿಸಬಾರದು ಎನ್ನುವ ಷರತ್ತಿನ ಮೇಲೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತವು ತನ್ನ ಬೇಡಿಕೆಯ ಕಚ್ಚಾ ತೈಲದ ಪೈಕಿ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ 2ರಿಂದ ಶೇ 3ರಷ್ಟು ಕಚ್ಚಾ ತೈಲವು ರಷ್ಯಾದಿಂದ ಪೂರೈಕೆ ಆಗುತ್ತದೆ. ರಷ್ಯಾ ದೇಶವು ಉಕ್ರೇನ್ ವಿರುದ್ಧ ಸಮರ ಸಾರಿದ ನಂತರದಲ್ಲಿ ಪಾಶ್ಚಿಮಾತ್ಯ ದೇಶಗಳು ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಹೀಗಾಗಿ ರಷ್ಯಾವು ರಿಯಾಯಿತಿ ದರದಲ್ಲಿ ಭಾರತಕ್ಕೆ ಕಚ್ಚಾ ತೈಲ ಪೂರೈಸುವ ಬೇಡಿಕೆ ಇಟ್ಟಿದ್ದು, ಅದಕ್ಕೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ರಷ್ಯಾದಿಂದ 30 ಲಕ್ಷ ಬ್ಯಾರಲ್‌ ಯೂರಲ್ಸ್ ಕಚ್ಚಾ ತೈಲ ಖರೀದಿಸಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಗೆ ಹೋಲಿಸಿದರೆ, ಪ್ರತಿ ಬ್ಯಾರಲ್‌ಗೆ 20–25 ಡಾಲರ್‌ ಕಡಿಮೆ ಬೆಲೆಗೆ ಯೂರಲ್ಸ್ ಕಚ್ಚಾ ತೈಲವನ್ನು ಐಒಸಿ ಖರೀದಿಸಿದೆ. ಎಚ್‌ಪಿಸಿಎಲ್‌ ಕಂಪನಿಯು ರಷ್ಯಾದಿಂದ 20 ಲಕ್ಷ ಬ್ಯಾರೆಲ್ ಯೂರಲ್ಸ್ ಕಚ್ಚಾ ತೈಲ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT