ಮಂಗಳವಾರ, ಜನವರಿ 31, 2023
19 °C
ಹೊಸ ವಹಿವಾಟುಗಳಲ್ಲಿ ಏರಿಕೆ: ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ

ಸೇವಾ ಚಟುವಟಿಕೆ 3 ತಿಂಗಳ ಗರಿಷ್ಠ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆಯು ನವೆಂಬರ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಸಂಸ್ಥೆ ಹೇಳಿದೆ.

ಬೇಡಿಕೆ ಹೆಚ್ಚಾಗುತ್ತಿರುವುದರ ಜೊತೆಗೆ ಹೊಸ ವಹಿವಾಟುಗಳಲ್ಲಿ ಏರಿಕೆ ಕಂಡುಬರುತ್ತಿರುವುದರಿಂದ ಸೇವಾ ಚಟುವಟಿಕೆಗಳಿಗೆ ವೇಗ ದೊರೆತಿದೆ ಎಂದು ಅದು ತಿಳಿಸಿದೆ.

ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಸೂಚ್ಯಂಕವು ಅಕ್ಟೋಬರ್‌ನಲ್ಲಿ 55.1ರಷ್ಟು ಇದ್ದಿದ್ದು ನವೆಂಬರ್‌ನಲ್ಲಿ 56.4ಕ್ಕೆ ಏರಿಕೆ ಆಗಿದೆ. ಕಾರ್ಯಾಚರಣಾ ವೆಚ್ಚ ಗರಿಷ್ಠ ಮಟ್ಟದಲ್ಲಿ ಇದ್ದರೂ ಈ ಮಟ್ಟದ ಬೆಳವಣಿಗೆ ಸಾಧ್ಯವಾಗಿದೆ. ಸತತ 16ನೇ ತಿಂಗಳಿನಲ್ಲಿಯೂ ಸೂಚ್ಯಂಕವು 50ಕ್ಕಿಂತ ಮೇಲ್ಮಟ್ಟದಲ್ಲಿ ಇದೆ.

ದೇಶಿ ಬೇಡಿಕೆ ಉತ್ತಮವಾಗಿದ್ದು,ಸೇವಾ ವಲಯದ ಕಂಪನಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿವೆ ಎಂದು ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ನೇಮಕಾತಿಯಲ್ಲಿ ಮೂರು ವರ್ಷಗಳಲ್ಲಿಯೇ ವೇಗದ ಬೆಳವಣಿಗೆ ಕಂಡುಬಂದಿದೆ. ತಯಾರಿಕೆ ಮತ್ತು ಸೇವಾ ವಲಯದ ಬೆಳವಣಿಗೆಗಳನ್ನು ತಿಳಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್‌ ಇಂಡೆಕ್ಸ್‌ ಅಕ್ಟೋಬರ್‌ನಲ್ಲಿ 55.5ರಷ್ಟು ಇದ್ದಿದ್ದು ನವೆಂಬರ್‌ನಲ್ಲಿ 56.7ಕ್ಕೆ ಏರಿಕೆ ಆಗಿದೆ.

ದೇಶದ ತಯಾರಿಕಾ ವಲಯದ ಚಟುವಟಿಕೆಗಳು ನವೆಂಬರ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿವೆ. ರಫ್ತು ಹೆಚ್ಚಾಗಿದ್ದು ಹಾಗೂ ಮಾರುಕಟ್ಟೆಯಲ್ಲಿ ಬೇಡಿಕೆಯು ಸ್ಥಿರವಾಗಿ ಇದ್ದಿದ್ದು ಈ ಏರಿಕೆಗೆ ಕಾರಣ ಎಂದು ಸಂಸ್ಥೆಯು ಈಚೆಗೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.