ಸೋಮವಾರ, ಜನವರಿ 24, 2022
20 °C

ಸೆಮಿಕಂಡಕ್ಟರ್ ತಯಾರಿಕೆ: ಟಾಟಾ ಸಮೂಹದಿಂದ ಮಾತುಕತೆ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಟಾಟಾ ಸಮೂಹವು ₹ 22 ಸಾವಿರ ಕೋಟಿವರೆಗಿನ ಹೂಡಿಕೆಯ ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಜೊತೆ ಮಾತುಕತೆ ನಡೆಸಿದೆ. 

ಹೊರಗುತ್ತಿಗೆ ಆಧಾರದ ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷಾ ಕೇಂದ್ರದ ಸ್ಥಾಪನೆಗಾಗಿ ಜಮೀನು ಹುಡುಕಾಟ ಕೂಡ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸೆಮಿಕಂಡಕ್ಟರ್ ಉದ್ಯಮ ಪ್ರವೇಶಿಸುವ ಇರಾದೆ ತನಗೆ ಇದೆ ಎಂದು ಟಾಟಾ ಸಮೂಹವು ಈ ಹಿಂದೆಯೇ ಹೇಳಿತ್ತು.

ಕಾರ್ಖಾನೆಯನ್ನು ಸ್ಥಾಪಿಸಲು ಅಗತ್ಯವಿರುವ ಸೂಕ್ತವಾದ ಕೆಲವು ಸ್ಥಳಗಳನ್ನು ಟಾಟಾ ಸಮೂಹ ಗುರುತಿಸಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ತಿಂಗಳ ವೇಳೆಗೆ ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ. ‘ಸಾಫ್ಟ್‌ವೇರ್ ಉದ್ಯಮದಲ್ಲಿ ಟಾಟಾ ಸಮೂಹವು ಬಲಿಷ್ಠವಾಗಿ ಬೆಳೆದಿದೆ. ಈಗ ದೀರ್ಘಾವಧಿಯ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು ಹಾರ್ಡ್‌ವೇರ್ ಕ್ಷೇತ್ರವನ್ನೂ ಸಮೂಹವು ಪ್ರವೇಶಿಸುತ್ತಿದೆ’ ಎಂದು ಮೂಲಗಳು ಹೇಳಿವೆ.

ಈ ವಿಚಾರವಾಗಿ ಟಾಟಾ ಸಮೂಹ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಪ್ರತಿಕ್ರಿಯೆ ನೀಡಿಲ್ಲ. ಟಾಟಾ ಸಮೂಹವು ಅತ್ಯಾಧುನಿಕ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ವಹಿವಾಟುಗಳಲ್ಲಿ ಹೂಡಿಕೆ ಮಾಡುವ ಆಲೋಚನೆ ಹೊಂದಿದೆ ಎಂದು ಅದರ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಈ ಹಿಂದೆ ಹೇಳಿದ್ದರು.

ಸೆಮಿಕಂಡಕ್ಟರ್ ಜೋಡಣೆ ಕಾರ್ಖಾನೆಯು ಮುಂದಿನ ವರ್ಷದಲ್ಲಿ ಕಾರ್ಯ ಆರಂಭಿಸಬಹುದು, ಇದು ಗರಿಷ್ಠ ನಾಲ್ಕು ಸಾವಿರ ಜನರಿಗೆ ಉದ್ಯೋಗ ನೀಡಬಹುದು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು