ನವದೆಹಲಿ: ನಗರ ಪ್ರದೇಶಗಳ ನಡುವಿನಸಂಪರ್ಕ ವ್ಯವಸ್ಥೆ ಸುಧಾರಿಸಲು ಸೆಪ್ಟೆಂಬರ್‌ನಲ್ಲಿ 38 ದೇಶೀಯ ವಿಮಾನಗಳ ಹಾರಾಟ ಆರಂಭಿಸುವುದಾಗಿ ಇಂಡಿಗೊ ತಿಳಿಸಿದೆ.
ರಾಯಪುರ ಮತ್ತು ಪುಣೆ ನಡುವೆ ಹೊಸದಾಗಿ ವಿಮಾನ ಹಾರಾಟ ಆರಂಭಿಸಲಾಗುವುದು. ಅದೇ ವೇಳೆ ಲಖನೌ-ರಾಂಚಿ, ಬೆಂಗಳೂರು-ವಿಶಾಖಪಟ್ಟಣಂ, ಚೆನ್ನೈ-ಇಂಧೋರ್, ಲಖನೌ-ರಾಯಪುರ, ಮುಂಬೈ-ಗುವಾಹಟಿ ಮತ್ತು ಇಂಧೋರ್-ಅಹಮದಾಬಾದ್ ನಗರಗಳಿಗೆ ವಿಮಾನ ಸೇವೆ ಪುನರಾರಂಭಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.
ʼನಮ್ಮ ದೇಶೀಯಸಂಪರ್ಕ ಜಾಲವನ್ನುಮತ್ತಷ್ಟು ಬಲಪಡಿಸಲು 38 ಹೊಸ ವಿಮಾನಗಳನ್ನು ಸೇರಿಸಲು ಹರ್ಷವಾಗುತ್ತಿದೆʼ ಎಂದು ಇಂಡಿಗೊದ ಕಾರ್ಯತಂತ್ರ ಮತ್ತು ಆದಾಯ ಅಧಿಕಾರಿ ಸಂಜಯ್ ಕುಮಾರ್ ಹೇಳಿದ್ದಾರೆ.
ʼಹೆಚ್ಚಾಗಿರುವ ಪ್ರಯಾಣದ ಬೇಡಿಕೆಯನ್ನು ಈ ವಿಮಾನಗಳು ಪೂರೈಸಲಿದ್ದು, ನಗರಗಳ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲಿವೆʼ ಎಂದೂ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.