ನವದೆಹಲಿ: ಇನ್ಫೊಸಿಸ್ ಕಂಪನಿಯ ಸ್ವತಂತ್ರ ನಿರ್ದೇಶಕ ಸ್ಥಾನದಿಂದ ಕಿರಣ್ ಮಜುಮ್ದಾರ್ ಶಾ ಅವರು ಮಾರ್ಚ್ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಡಿ. ಸುಂದರಂ ಅವರನ್ನು ನೇಮಿಸಲಾಗಿದೆ.
ಶಾ ಅವರ ಅವಧಿಯು ಬುಧವಾರ ಅಂತ್ಯವಾಗಿದೆ. ಹೀಗಾಗಿ ಅವರ ಸ್ಥಾನಕ್ಕೆ ಸ್ವತಂತ್ರ ನಿರ್ದೇಶಕರನ್ನಾಗಿ ಡಿ. ಸುಂದರಂ ಅವರನ್ನು ಗುರುವಾರದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.