ಗುರುವಾರ , ಸೆಪ್ಟೆಂಬರ್ 16, 2021
25 °C

ಇನ್ಫೊಸಿಸ್ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹49.68 ಕೋಟಿಗೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇನ್ಫೊಸಿಸ್‌ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸಲೀಲ್‌ ಪಾರೇಖ್‌ ಅವರ ಒಟ್ಟು ವಾರ್ಷಿಕ ವೇತನ 2020–21ರಲ್ಲಿ ₹49.68 ಕೋಟಿಗೆ ಏರಿಕೆಯಾಗಿದೆ.

2019–20ರಲ್ಲಿ ಅವರ ಒಟ್ಟು ವಾರ್ಷಿಕ ವೇತನ ₹34.27 ಕೋಟಿ ಆಗಿತ್ತು.

ಕಂಪನಿಯು 2020–21ನೇ ಸಾಲಿನ ವಾರ್ಷಿಕ ವರದಿಯಲ್ಲಿ ಸಿಇಒ ವೇತನದ ಬಗ್ಗೆ ಉಲ್ಲೇಖಿಸಿದೆ. ಪಾರೇಖ್‌ ಅವರು ₹6.07 ಕೋಟಿ ವೇತನ, ₹12.62 ಕೋಟಿ ಬೋನಸ್, ಇನ್‌ಸೆಂಟಿವ್ಸ್‌ ಅಥವಾ ವೇರಿಯೇಬಲ್ ಪೇ ಹಾಗೂ ಇತರೆ ₹30.99 ಕೋಟಿ ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಓದಿ: 

ದೇಶದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಕಂಪನಿಯ ಸಿಇಒ, ಎಂಡಿ ರಾಜೇಶ್‌ ಗೋಪಿನಾಥನ್ ಅವರ 2020–21ನೇ ಸಾಲಿನ ವಾರ್ಷಿಕ ವೇತನ ₹20.36 ಕೋಟಿ ಆಗಿದೆ. ಇವರ ಒಟ್ಟು ವಾರ್ಷಿಕ ವೇತನ ಕಳೆದ ಬಾರಿ ₹13.3 ಕೋಟಿ ಆಗಿತ್ತು.

ಇನ್ಫೊಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಅವರು 2020-21ರ ಅವಧಿಯಲ್ಲಿ ಕಂಪನಿಗೆ ಸಲ್ಲಿಸಿದ ಸೇವೆಗಳಿಗೆ ಸ್ವಯಂಪ್ರೇರಣೆಯಿಂದ ಸಂಭಾವನೆ ಪಡೆದಿಲ್ಲ ಎಂದೂ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯ ಕಾರ್ಯಾಚರಣೆ ಅಧಿಕಾರಿ ಯು.ಬಿ.ಪ್ರವೀಣ್ ರಾವ್ ಅವರ ವಾರ್ಷಿಕ ವೇತನ ಕಳೆದ ಹಣಕಾಸು ವರ್ಷದಲ್ಲಿ ₹10.6 ಕೋಟಿ ಇದ್ದುದು 2020–21ನೇ ಸಾಲಿನಲ್ಲಿ ₹17.33 ಕೋಟಿಗೆ ಹೆಚ್ಚಳವಾಗಿದೆ.

ಓದಿ: 

ಕಂಪನಿಯ ಬೆಳವಣಿಗೆಯ ಅವಕಾಶಗಳ ಬಗ್ಗೆ ಪಾರೇಖ್ ಅವರು ವಾರ್ಷಿಕ ವರದಿಯಲ್ಲಿ ಅಶಾವಾದ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಇನ್ಫೊಸಿಸ್‌ನ 40ನೇ ವಾರ್ಷಿಕ ಮಹಾಸಭೆಯು ಜೂನ್ 19ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು