ನವದೆಹಲಿ: ಆದಾಯ ತೆರಿಗೆ ಪೋರ್ಟಲ್ ಪ್ರವೇಶಿಸುವಲ್ಲಿಕೆಲವು ಬಳಕೆದಾರರು ಈಗಲೂ ತೊಂದರೆ ಎದುರಿಸುತ್ತಿದ್ದಾರೆ ಎಂದು ಇನ್ಫೊಸಿಸ್ ಕಂಪನಿ ಗುರುವಾರ ತಿಳಿಸಿದೆ.
ಬಳಕೆದಾರರ ಅನುಭವವನ್ನು ಮತ್ತಷ್ಟು ಸುಗಮಗೊಳಿಸಲು ಆದಾಯ ತೆರಿಗೆ ಇಲಾಖೆಯ ಸಹಯೋಗದೊಂದಿಗೆ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿಯೂ ಕಂಪನಿ ಹೇಳಿದೆ.
ಕಳೆದ ಕೆಲವು ವಾರಗಳಲ್ಲಿ ಜಾಲತಾಣ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮೂರು ಕೋಟಿಗೂ ಹೆಚ್ಚು ತೆರಿಗೆದಾರರು ಪೋರ್ಟಲ್‌ಗೆ ಲಾಗಿನ್ ಆಗಿ ವಿವಿಧ ವಹಿವಾಟುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕೆಲವು ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಪನಿಯು ಗುರುತಿಸಿದೆ. 1,200ಕ್ಕೂ ಅಧಿಕ ತೆರಿಗೆ ಪಾವತಿದಾರರೊಂದಿಗೆ ನೇರ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ನಡೆಯುತ್ತಿದೆ ಎಂದೂ ಹೇಳಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿ ದಿನ ಸರಾಸರಿ 15 ಲಕ್ಷ ತೆರಿಗೆ ಪಾವತಿದಾರರು ಪೋರ್ಟಲ್‌ಗೆ ಲಾಗಿನ್ ಆಗಿದ್ದಾರೆ. ಇದುವರೆಗೆ 1.5 ಕೋಟಿಗೂ ಅಧಿಕ ರಿಟರ್ನ್ಸ್ ಸಲ್ಲಿಕೆ ಆಗಿದೆ. ರಿಟರ್ನ್ಸ್ ಸಲ್ಲಿಸಿರುವವರಲ್ಲಿ ಶೇಕಡ 85ರಷ್ಟು ತೆರಿಗೆದಾರರು ಆಧಾರ್ ಒಟಿಪಿ ಮೂಲಕ ರಿಟರ್ನ್ಸ್‌ನ ಆನ್‌ಲೈನ್ ದೃಢೀಕರಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.