ಗುರುವಾರ , ಜನವರಿ 23, 2020
23 °C

ರಿಯಲ್‌ ಎಸ್ಟೇಟ್‌: ಹೂಡಿಕೆ ಹೆಚ್ಚಲಿದೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಈ ವರ್ಷ ಹೂಡಿಕೆ ಶೇ 5ರಷ್ಟು ಹೆಚ್ಚಾಗಲಿದ್ದು, ₹ 46 ಸಾವಿರ ಕೋಟಿಗಳಿಗೆ ತಲುಪಲಿದೆ ಎಂದು ಜಾಗತಿಕ ಆಸ್ತಿ ಸಲಹಾ ಸಂಸ್ಥೆ ಕೋಲಿಯರ್ಸ್ ಹೇಳಿದೆ.

2019ರಲ್ಲಿ ₹ 43,780 ಕೋಟಿ ಹೂಡಿಕೆಯಾಗಿತ್ತು.

ಐ.ಟಿ ಕಂಪನಿಗಳಿಂದ ವಾಣಿಜ್ಯ ಕಚೇರಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿಯೂ ಹೂಡಿಕೆದಾರರು ವಾಣಿಜ್ಯ ಕಚೇರಿಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲಿದ್ದಾರೆ ಎಂದು ಹೇಳಿದೆ.

ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ, ಜಿಎಸ್‌ಟಿ, ದಿವಾಳಿ ಕಾಯ್ದೆ ಮತ್ತು ವಿದೇಶಿ ಹೂಡಿಕೆಗೆ ನಿಯಮ ಸಡಿಲಿಸಿರುವುದರಿಂದಾಗಿ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದಿದೆ.

ಬೆಂಗಳೂರು, ಹೈದರಾಬಾದ್‌ ಮತ್ತು ಪುಣೆಯಂತಹ ಐ.ಟಿ ಕೇಂದ್ರಿತ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡುವಂತೆ ಸಲಹೆ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು