ಭಾನುವಾರ, ಸೆಪ್ಟೆಂಬರ್ 27, 2020
22 °C
ತೈಲ, ತೈಲಯೇತರ ರಫ್ತು ಹೆಚ್ಚಿಸಲು ಕರೆ ನೀಡಿದ ಅಧ್ಯಕ್ಷ ಹಸನ್‌ ರೌಹಾನಿ

ಅಮೆರಿಕಕ್ಕೆ ಎದುರೇಟು ನೀಡಲಿರುವ ಇರಾನ್

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ದುಬೈ: ‘ಕಚ್ಚಾ ತೈಲ ಮತ್ತು ಕಚ್ಚಾ ತೈಲಯೇತರ ರಫ್ತು ಹೆಚ್ಚಿಸುವ ಮೂಲಕ ಅಮೆರಿಕ ಹೇರಿರುವ ನಿರ್ಬಂಧಕ್ಕೆ ಎದುರೇಟು ನೀಡಬೇಕಿದೆ’ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದ್ದಾರೆ.

ಇರಾನ್‌ ಟಿವಿಯಲ್ಲಿ ಮಾತನಾಡಿದ ಅವರು, ಅಮೆರಿಕವು ನಮ್ಮ ವಿದೇಶಿ ವಿನಿಮಯ ಮೀಸಲು ಸಂಗ್ರಹವನ್ನು ಕಡಿಮೆ ಮಾಡಲು ಯತ್ನಿಸುತ್ತಿದೆ. ಹೀಗಾಗಿ ನಾವು ನಮ್ಮ ಕರೆನ್ಸಿ ವರಮಾನ ಹೆಚ್ಚಿಸಿಕೊಳ್ಳುವ ಜತೆಗೆ ಕರೆನ್ಸಿ ವೆಚ್ಚವನ್ನೂ ಕಡಿತ ಮಾಡಬೇಕಿದೆ ಎಂದಿದ್ದಾರೆ.

‘ಹಿಂದಿನ ವರ್ಷ ತೈಲಯೇತರ ರಫ್ತು ಮೌಲ್ಯ ₹ 3 ಲಕ್ಷ ಕೋಟಿ ಇತ್ತು. ಇದನ್ನು ಇನ್ನಷ್ಟು ಹೆಚ್ಚಿಸಬೇಕು. ನಮ್ಮ ತೈಲ ರಫ್ತು ಮೇಲೆ ಅಮೆರಿಕ ಹೇರಿರುವ ನಿಷೇಧವನ್ನು ವಿರೋಧಿಸಬೇಕು’ ಎಂದಿದ್ದಾರೆ.

ರಫ್ತು ತಗ್ಗಲಿದೆ: ಮೇ ತಿಂಗಳಿನಲ್ಲಿ ಇರಾನ್‌ನಿಂದ ತೈಲ ರಫ್ತು ಕಡಿಮೆಯಾಗಲಿದೆ ಎಂದು ಉದ್ಯಮ ಮೂಲಗಳು ಹೇಳಿವೆ.

ಭಾರತವನ್ನೂ ಒಳಗೊಂಡು 8 ದೇಶಗಳಿಗೆ ನೀಡಿದ್ದ ವಿನಾಯ್ತಿ ಮೇ2ಕ್ಕೆ ಕೊನೆಗೊಂಡಿದೆ. ಹೀಗಾಗಿ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವಂತಿಲ್ಲ.

ಮೇನಲ್ಲಿ ಪ್ರತಿ ದಿನದ ರಫ್ತು 7 ಲಕ್ಷ ಬ್ಯಾರೆಲ್‌ಗಳಿಗೆ ಇಳಿಕೆಯಾಗಲಿದ್ದು, ಆ ಬಳಿಕ 5 ಲಕ್ಷ ಬ್ಯಾರೆಲ್‌ಗೆ ತಗ್ಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

4 ಲಕ್ಷ ಬ್ಯಾರೆಲ್‌ನಿಂದ 6 ಲಕ್ಷ ಬ್ಯಾರೆಲ್‌ಗಳವರೆಗೆ ಇರಾನ್‌ನಿಂದ ರಫ್ತು ಮುಂದುವರಿಯಲಿದೆ ಎಂದು ತೈಲೋತ್ಪನ್ನ ರಫ್ತು ದೇಶಗಳ ಸಂಘಟನೆಯ (ಒಪೆಕ್‌) ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು